ನವದೆಹಲಿ: 24 ವರ್ಷದ ಯುವಕನೊಬ್ಬ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ಪ್ರೇಯಸಿಯನ್ನೇ ಕೊಂದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಉಪ ಪೊಲೀಸ್ ಆಯುಕ್ತ(ವಾಯುವ್ಯ) ಉಷಾ ರಂಗನಾನಿ ಈ ಕುರಿತು ಮಾಹಿತಿ ನೀಡಿದ್ದು, ಶುಕ್ರವಾರ ಪೂರ್ವ ದೆಹಲಿಯ ವಿಶ್ವಾಸ್ ನಗರದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆತ ಯುಪಿಯ ಘಾಜಿಯಾಬಾದ್‍ನ ಲೋನಿಯ ನಿವಾಸಿಯಾಗಿದ್ದು, 21 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಅವಳು ಅವನನ್ನು ಪ್ರೀತಿಸುವುದಿಲ್ಲವೆಂದು ಹೇಳಿ, ಅಂತರವನ್ನು ಕಾaಯ್ದುಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ ಆಕೆ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದ ಎಂದು ವಿವರಿಸಿದರು. ಇದನ್ನೂ ಓದಿ: ಪ್ರತಿಭಟನಾ ಶಿಬಿರ ಧ್ವಂಸಗೊಳಿಸಿದ ಶ್ರೀಲಂಕಾ ಭದ್ರತಾ ಪಡೆ
Advertisement
ಸಂತ್ರಸ್ತೆಗೆ ಎರಡು ಗುಂಡು ಹಾರಿದ್ದು, ಹಿಂದೂ ರಾವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಘಟನೆ ನಂತರ ಆಕೆಯ ಕುಟುಂಬಸ್ಥರು ಆಕ್ರೋಶ ಹೊರಹಾಕಿ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕೇಳಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ, ಪೊಲೀಸರು ಲೋನಿಯ ರಾಜಪುರಿ ಕಾಲೋನಿ ಬಳಿ ಯುವಕ ಇರುವುದನ್ನು ಪತ್ತೆಹಚ್ಚಿದರು. ಬಳಿಕ ಆತ ಬೈಕ್‍ನಲ್ಲಿ ಪರಾರಿಯಾಗಿದ್ದು, ಪೊಲೀಸರು ಆತನನ್ನು ಹಿಂಬಾಲಿಸಲು ಆರಂಭಿಸಿದ್ದಾರೆ. ಶಹದ್ರಾ, ಕೃಷ್ಣ ನಗರ, ಭೋಲಾನಾಥ್ ನಗರ ಮತ್ತು ದಿಲ್ಶಾದ್ ಗಾರ್ಡನ್ ಸೇರಿ ಆಗಾಗ್ಗೆ ಹಲವು ಸ್ಥಳಗಳನ್ನು ಬದಲಾಯಿಸುತ್ತಿದ್ದ. ನಂತರ ದೆಹಲಿಯ ವಿಶ್ವಾಸ್ ನಗರದಲ್ಲಿ ಸಿಕ್ಕಿದ್ದಾನೆ ಎಂದು ತಿಳಿಸಿದರು.
Advertisement
Advertisement
ವಿಚಾರಣೆ ವೇಳೆ, ಆರೋಪಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ಈತ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಆಕೆ ಒಪ್ಪಿಕೊಂಡಿರಲಿಲ್ಲ. ಆತ ಕೋಪಗೊಂಡಿದ್ದು, ಆಕೆಯನ್ನು ಹೊಡೆದು ಗುಂಡು ಹಾರಿಸಿದ್ದಾನೆ. ಪ್ರಸ್ತುತ ಕೃತ್ಯಕ್ಕೆ ಬಳಸಿದ್ದ ಆಯುಧಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ಕೊಟ್ಟರು. ಇದನ್ನೂ ಓದಿ: ನಲಪಾಡ್ ಮಾಡಿರೋ ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ: ಅಶೋಕ್ ಪಟ್ಟಣ