ರೆಹಮಾನ್ ಧ್ವನಿಗಾಗಿ ಮದುವೆ ಆದರಂತೆ ಪತ್ನಿ ಸಾಯಿರಾ ಬಾನು

Public TV
1 Min Read
AR Rahman Saira Banu 2

ಸಂಗೀತದ ಮೂಲಕ ಜಗತ್ತನ್ನೇ ತಮ್ಮತ್ತ ಸೆಳೆದುಕೊಂಡಿರುವ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ (AR Rahman) ಕುರಿತಾಗಿ ಪತ್ನಿ ಸಾಯಿರಾ ಬಾನು (Saira Banu) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜೊತೆಗೆ ತಾವು ರೆಹಮಾನ್ ಅವರನ್ನು ಮದುವೆ (Marriage) ಆಗಲು ಅವರ ಕಂಚಿನಕಂಠವೇ ಕಾರಣ ಎಂಬುದನ್ನೂ ತಿಳಿಸಿದ್ದಾರೆ. ಪತಿಯ ಬಗ್ಗೆ ಮಾತನಾಡುವಾಗ ತುಸು ಭಾವುಕರೇ ಆಗಿದ್ದರು ಸಾಯಿರಾ ಬಾನು.

AR Rahman Saira Banu 1

ಇತ್ತೀಚೆಗಷ್ಟೇ  ವಿಕಟನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದರು ರೆಹಮಾನ್ ಮತ್ತು ಸಾಯಿರಾ ಬಾನು. ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ರೆಹಮಾನ್ ಪತ್ನಿಯನ್ನೂ ವೇದಿಕೆಗೆ ಕರೆದರು. ಎರಡು ಮಾತುಗಳನ್ನು ಹೇಳುವಂತೆ ಕೇಳಿಕೊಂಡರು. ಆ ಸಮಯದಲ್ಲಿ ಸಾಯಿರಾ ಹಿಂದಿಯಲ್ಲಿ ಮಾತನಾಡುವುದಕ್ಕೆ ಶುರು ಮಾಡಿದರು. ಕೂಡಲೇ ಮಧ್ಯ ಪ್ರವೇಶ ಮಾಡಿದ ರೆಹಮಾನ್, ‘ಹಿಂದಿ ಬೇಡ ತಮಿಳಿನಲ್ಲೇ ಮಾತನಾಡು’ ಎಂದು ಹೇಳಿದರು. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

AR Rahman Saira Banu 3

ಹೆಂಡತಿಗೆ ತಮಿಳಿನಲ್ಲಿ ಮಾತನಾಡು ಎಂದು ರೆಹಮಾನ್ ಹೇಳುವ ವಿಡಿಯೋ ಸಖತ್ ವೈರಲ್ ಆಗಿದೆ. ಪತಿಯ ಮಾತಿಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಾಯಿರಾ, ‘ನನಗೆ ಸಲೀಸಾಗಿ ತಮಿಳು ಮಾತನಾಡಲು ಬರುವುದಿಲ್ಲ, ಕ್ಷಮಿಸಿ’ ಎಂದು ಹೇಳುತ್ತಾ ಇಂಗ್ಲಿಷಿನಲ್ಲಿ ಮಾತನಾಡುತ್ತಾರೆ. ನಾನು ರೆಹಮಾನ್ ದೊಡ್ಡ ಅಭಿಮಾನಿ. ಅವರ ಕಂಠಕ್ಕೆ ಫಿದಾ ಆದೆ. ನಾನು ಮದುವೆ ಆಗಿದ್ದು ಅವರ ಗಾಯನಕ್ಕಾಗಿ’ ಎಂದಿದ್ದಾರೆ.

Share This Article