– ಗನ್ ಪಾಯಿಂಟ್ ಇಟ್ಟು ಕೆಲ್ಸ ಮಾಡಿಸಬೇಡಿ
– ಮಾನವೀಯತೆ ಪಾಠ ನಿಮ್ಮಿಂದ ಕಲಿಯಬೇಕಿಲ್ಲ: ಡಾ. ರವೀಂದ್ರ
– ರಾಜ್ಯ ಸರ್ಕಾರ, ರಮೇಶ್ ಕುಮಾರ್ ವಿರುದ್ಧ ಖಾಸಗಿ ವೈದ್ಯರ ಕಿಡಿ
– ರಾಜ್ಯ ಸರ್ಕಾರ, ರಮೇಶ್ ಕುಮಾರ್ ವಿರುದ್ಧ ಖಾಸಗಿ ವೈದ್ಯರ ಕಿಡಿ
ಬೆಂಗಳೂರು: ರಾಜ್ಯ ಸರ್ಕಾರದ ಏಕರೂಪ ಸೇವಾಶುಲ್ಕ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ ಆರಂಭವಾಗಿದೆ. ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಹಾಗೂ ಮೆಡಿಕಲ್ ಅಸೋಸಿಯೇಷನ್ ಜಂಟಿಯಾಗಿ ರಾಜ್ಯ ಸರ್ಕಾರದ ವಿಧೇಯಕ ವಿರೋಧಿಸಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸುತ್ತಿದ್ದಾರೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ವೈದ್ಯರ ರ್ಯಾಲಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
Advertisement
ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಖಾಸಗಿ ವೈದ್ಯರು ಆಗಮಿಸಿದ್ದಾರೆ. ವೈದ್ಯರ ಮುಷ್ಕರಕ್ಕೆ ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ, ಕ್ಲೌಡ್ ನೈನ್ ಆಸ್ಪತ್ರೆಯ ನಿರ್ದೇಶಕ ಡಾ.ಕಿಶೋರ್ ಕುಮಾರ್, ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್ ಸೇರಿದಂತೆ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾಗಿಯಾಗಿದ್ದಾರೆ.
Advertisement
ಇದೇ ವೇಳೆ ಮಾತನಾಡಿದ ಐ.ಎಂ.ಎ ಅಧ್ಯಕ್ಷ ಡಾ. ರವೀಂದ್ರ ಅವರು, ಸಚಿವ ರಮೇಶ್ ಕುಮಾರ್ ಮತ್ತು ಕೈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನೀವು ನಮ್ಮನ್ನು ಲಜ್ಜೆಗೇಡಿ, ಲೂಟಿಕೋರರು ಅಂತ ಕರೆಯೋಕೆ ನಾವು ಹೆಂಗೆಂಗೋ ಹುಟ್ಟಿಬಂದಿಲ್ಲ. ನಮ್ಗೂ ಸಂಸ್ಕಾರ ಇದೆ. ನಿಮಗೆ ಯಾವುದಾದರೂ ವೈದ್ಯರಿಂದ ವೈಯಕ್ತಿಕವಾಗಿ ಅನ್ಯಾಯವಾಗಿದೆ. ಅದಕ್ಕೆ ಈ ವಿಧೇಯಕ ಜಾರಿಗೆ ತರಲು ಹೊರಟ್ಟಿದ್ದೀರಾ ಅನಿಸುತ್ತದೆ ಎಂದು ಆರೋಪಿಸಿದರು.
Advertisement
Advertisement
ಪರಿಸ್ಥಿತಿ ಹೀಗೆಯೇ ಮುಂದುವರೆದ್ರೆ ಎಲ್ಲಾ ವೈದ್ಯರು ವೃತ್ತಿ ಬಿಟ್ಟು ಬಿಟ್ರೆ ನೀವೇನು ಮಾಡ್ತೀರಿ. ಚಿಕಿತ್ಸೆಗೆ ಇಷ್ಟು ಅಂತಾ ಫಿಕ್ಸ್ ಮಾಡೋಕೆ ಇದು ಗಾರೆ ಸಿಮೆಂಟ್ ಕೆಲ್ಸ ಅಲ್ಲ. ಮೊದಲು ವೈದ್ಯರ ಸೇವೆನಾ ಅಥವಾ ಟ್ರೇಡ್ ಬ್ಯುಸಿನೆಸ್ ಅಂತಾ ಸ್ಪಷ್ಟತೆ ಕೊಡಿ. ಸೇವೆ ಅಂಥ ಹೇಳೋದಾದ್ರೆ ಮಠ ಮಾನ್ಯ, ಎನ್.ಜಿ.ಓ.ಗಳಿಗೆ ಕೊಡುವ ಸವಲತ್ತು ನೀಡಿ. ಟ್ರೇಡ್ ಬ್ಯುಸಿನೆಸ್ ಅಂತಾ ಆದ್ರೆ ನಮ್ಮ ತಂಟೆಗೆ ಬರಬೇಡಿ. ಗನ್ ಪಾಯಿಂಟ್ ಇಟ್ಟು ಕೆಲ್ಸ ಮಾಡಿಸಬೇಡಿ. ಮಾನವೀಯತೆ ಪಾಠ ನಿಮ್ಮಿಂದ ಕಲಿಯಬೇಕಿಲ್ಲ. ಮಾನವೀಯತೆ ಇಟ್ಕೊಂಡು ಈ ವೃತ್ತಿಗೆ ಬಂದಿದ್ದೇವೆ ಎಂದರು.
ನಾರಾಯಣ ಹೃದಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ದೇವಿ ಶೆಟ್ಟಿ ಮಾತನಾಡಿ, ಸರ್ಕಾರಿ ಆಸ್ಪತ್ರೆ ಸರಿಯಿದ್ರೆ ಜನ ಯಾಕೆ ಖಾಸಗಿಗೆ ಬರ್ತಾರೆ. ನೀವು ಸರ್ಕಾರಿ ಆಸ್ಪತ್ರೆಯನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಸರ್ಕಾರದ ಈ ವಿಧೇಯಕದಿಂದ ಖಾಸಗಿ ಆಸ್ಪತ್ರೆಗೆ ತೊಂದರೆಯಾಗಲಿದೆ. ಈ ವಿಧೇಯಕದ ಬಗ್ಗೆ ಚರ್ಚೆ ನಡೆಸಿ ವಾಪಾಸು ಪಡೆದುಕೊಳ್ಳುತ್ತಾರೆ ಅಂತಾ ಸರ್ಕಾರದ ಮೇಲೆ ಭರವಸೆ ಇದೆ. ಇಲ್ಲದೇ ಇದ್ರೆ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಮಾಡಿಕೊಳ್ತೀವಿ ಎಂದರು.