ಹೈದರಾಬಾದ್: ಸಾಕುಪ್ರಾಣಿಗಳನ್ನು ನೋಂದಾಯಿಸದವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆದೇಶವನ್ನು ಹೊರಡಿಸಿದೆ.
ಈ ಕಾನೂನಿನ ಪ್ರಕಾರ ಕಡ್ಡಾಯ ನೋಂದಣಿ ಸಾಕು ನಾಯಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇತರೆ ಸಾಕು ಪ್ರಾಣಿಗಳಿಗೆ ವಿನಾಯಿತಿಯನ್ನು ನೀಡಿದೆ. ಶ್ವಾನಪ್ರೇಮಿಗಳು ನೋಂದಣಿಯಾಗದ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ದರೆ ಶೀಘ್ರದಲ್ಲೇ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಾಯಿಸದ ಸಾಕುಪ್ರಾಣಿಗಳನ್ನು ಉದ್ಯಾನವನಗಳು, ಬೀದಿಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವುದು, ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಸಾಕುನಾಯಿಗಳ ನೋಂದಣಿ ಕಡ್ಡಾಯವಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ
ಒಂದು ವೇಳೆ ನೋಂದಾಯಿಸದ ಸಾಕು ಪ್ರಾಣಿಗಳನ್ನು ಸಾರ್ವಜನಿಕ ಪ್ರದೇಶಕ್ಕೆ ಕರೆತಂದರೆ ಅವುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ 1,000 ರಿಂದ 50,000 ರೂ.ವರೆಗೂ ದಂಡವನ್ನು ವಿಧಿಸಲಾಗುತ್ತದೆ. ದಂಡವನ್ನು ಪಾವತಿಸಿದ ನಂತರವೇ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಮರಳಿ ಪಡೆಯಬಹುದು ಎಂದು ಹೇಳಿದರು.
ಈ ನಿಯಮಗಳ ಅಡಿಯಲ್ಲಿ, ಶ್ವಾನ ಮಾಲೀಕರು ಪರವಾನಗಿ ಪಡೆಯಬೇಕು. ಜೊತೆಗೆ ಸಾಕು ನಾಯಿಗಳಿಗೆ ಪ್ರತಿ ವರ್ಷ ರೇಬಿಸ್ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ. ಅಲ್ಲದೆ ಸಾಕುಪ್ರಾಣಿಗಳಿಗೆ ಮೈಕ್ರೋಚಿಪ್ ಅಳವಡಿಸಬೇಕು. ಮೈಕ್ರೋಚಿಪ್ ಮೂಲಕ ಅವುಗಳು ನಗರದ ಯಾವುದೇ ಮೂಲದಲ್ಲಿದ್ದರೂ ಸುಲಭವಾಗಿ ಮಾಲೀಕರು ಟ್ರ್ಯಾಕ್ ಮಾಡಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ
ಅಧಿಕೃತ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಪ್ರಸ್ತುತ 50,000 ಸಾಕುನಾಯಿಗಳಿದ್ದು, ಅವುಗಳಲ್ಲಿ 465 ಸಾಕು ನಾಯಿಗಳು ಎಂದು ನೋಂದಾಯಿಸಲಾಗಿದೆ.