ಕೋಲಾರ: ಜಿಲ್ಲೆಯಲ್ಲಿ (Kolar) ಇತ್ತೀಚೆಗೆ ನಡೆದ ಎರಡು ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಟ್ವೀಟ್ ಮೂಲಕ ಆತಂಕ ಹೊರಹಾಕಿದ್ದಾರೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ 2 ಕಡೆಗಳಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆದಿವೆ. ಇದು ನಮ್ಮೆಲ್ಲರ ಮನ ಕಲುಕಿದೆ. ಸಮಾಜದಲ್ಲಿ ಅಂತರ್ಗತ ಜಾತಿ ವ್ಯವಸ್ಥೆ ಸಾಮಾಜಿಕ ಕಟ್ಟು ಪಾಡುಗಳ ಹೀನ ಮನಸ್ಥಿತಿ ಇಂತಹ ಘಟನೆಗಳು ಪ್ರತಿಫಲಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪ್ರಕರಣಗಳಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಡೆದಿರೋ ಮರ್ಯಾದಾ ಹತ್ಯೆ ಕೇಸ್ ಸುಮೋಟೊ ಕೇಸ್ ಹಾಕಿ ತನಿಖೆ: ಪರಮೇಶ್ವರ್
Advertisement
ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಾಗುತ್ತದೆ. ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರು ದಲಿತರಿಗೆ ದೇವಸ್ಥಾನ, ಮನೆಗಳಲ್ಲಿ ಕಾಲಿರಿಸಲು ಅವಕಾಶ ನೀಡದ ಆಚರಣೆ, ಸಂಪ್ರದಾಯ ನಮ್ಮಲ್ಲಿವೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
Advertisement
Advertisement
ಜಾತಿ ಕಟ್ಟು ಪಾಡುಗಳನ್ನ ಮೀರಲು ಮಾನವೀಯತೆ, ವಿಚಾರವಂತಿಕೆಯ ದಾರಿ, ಜಾಗೃತಿಯೇ ಅಸ್ತ್ರವಾಗಿದೆ. ಸಮಾಜವನ್ನ ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಲ್ಲಾ ಸಮಾಜ ಸುಧಾರಕರ ಆಶಯಗಳನ್ನ ವ್ಯಾಪಕವಾಗಿ ಪ್ರಚುರಪಡಿಸುವುದು ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳಿಗೆ ಮುಂದಾಗಲಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
Advertisement
ಆ.25 ರಂದು ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದಲ್ಲಿ 19 ವರ್ಷದ ಯುವತಿ ಕೆಳ ವರ್ಗಕ್ಕೆ ಸೇರಿದ ಯುವಕನನ್ನ ಪ್ರೀತಿಸುತ್ತಿದ್ದ ಕಾರಣಕ್ಕೆ ಆಕೆಯ ತಂದೆ ವೆಂಕಟೇಶ ಗೌಡ ಕೊಲೆಗೈದಿದ್ದ. ಈ ವಿಚಾರವಾಗಿ ವೆಂಕಟೇಶ್ ಗೌಡ, ಕೊಲೆಗೆ ಸಹಕರಿಸಿದ ಅಣ್ಣ ಮೋಹನ್ ಕುಮಾರ್ ಮತ್ತು ಚಿಕ್ಕಪ್ಪ ಚೌಡೆಗೌಡನನ್ನ ಪೊಲೀಸರು (Police) ಬಂಧಿಸಿದ್ದಾರೆ.
ಜೂ.27 ರಂದು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಬೋಡಗುರ್ಕಿ ಗ್ರಾಮದಲ್ಲಿ ಕೃಷ್ಣಮೂರ್ತಿ ಎಂಬಾತ ಕೆಳವರ್ಗಕ್ಕೆ ಸೇರಿದ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ಕೊಲೆಗೈದಿದ್ದ. ಬಳಿಕ ಆಕೆಯನ್ನು ಪ್ರೀತಿಸುತ್ತಿದ್ದ ಯುವಕ ಸಹ ಆತ್ಮಹತ್ಯೆಗೆ ಶರಣಾಗಿದ್ದ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕಲಾ ಪ್ರತಿನಿಧಿಯಾಗಿ ಮೈಸೂರಿಗೆ ದೀಪ ಹಚ್ಚಲು ಬರುತ್ತೇನೆ: ಹಂಸಲೇಖ
Web Stories