CrimeLatestMain PostNational

ಸಾಲಕ್ಕೆ ತಿಂಡಿ ನೀಡಲು ನಿರಾಕರಣೆ – ಮಾಲೀಕ ಸೇರಿದಂತೆ 7 ಮಂದಿ ಮೇಲೆ ಆ್ಯಸಿಡ್ ದಾಳಿ

ರಾಂಚಿ: ತಿಂಡಿಯನ್ನು ಸಾಲ ನೀಡಲು ನಿರಾಕರಿಸಿದ ಸ್ವೀಟ್ ಅಂಗಡಿ ಮಾಲೀಕನ ಮೇಲೆ ವ್ಯಕ್ತಿಯೋರ್ವ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಜಾರ್ಖಂಡ್‍ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.

ಜರ್ಮುಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ವೀಟ್ ಸ್ಟಾಲ್ ಮಾಲೀಕರು ಸಾಲಕ್ಕೆ ತಿಂಡಿ ನೀಡಲು ನಿರಾಕರಿಸಿದಕ್ಕೆ ಅವರ ಮನೆ ಹಾಗೂ ಅಂಗಡಿಯೊಳಗೆ ನುಗಿ ವ್ಯಕ್ತಿಯೋರ್ವ ಆ್ಯಸಿಡ್ ದಾಳಿ ನಡೆಸಿದ್ದಾನೆ. ಅಲ್ಲದೇ ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ 20 ರೂ. ಚಹಾಗೆ 50 ರೂ. ಸೇವಾಶುಲ್ಕ – ಪ್ರಯಾಣಿಕ ಶಾಕ್

ಈ ಘಟನೆ ಸಂಬಂಧ ಇದೀಗ ಸ್ವೀಟ್ ಅಂಗಡಿ ಮಾಲೀಕನ ಹೇಳಿಕೆ ಆಧಾರದ ಮೇಲೆ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

Live Tv

Leave a Reply

Your email address will not be published.

Back to top button