– ಹೊಸದಾಗಿ ಮದುವೆಯಾಗಿದ್ದ ದಂಪತಿಗೆ ದೇವಸ್ಥಾನಕ್ಕೆ ನೋ ಎಂಟ್ರಿ ಎಂದ ವ್ಯಕ್ತಿ ಬಂಧನ
ತುಮಕೂರು: ಗೃಹ ಸಚಿವರ ತವರಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇವರು ಬಂದಂತೆ ನಾಟಕವಾಡಿ ದಲಿತರನ್ನು (Dalits) ಗ್ರಾಮಸ್ಥನೊಬ್ಬ ದೇವಾಲಯದಿಂದ ಹೊರಗೆ ಕಳಿಸಿರುವ ಘಟನೆ ನಡೆದಿದೆ.
ತುಮಕೂರು (Tumakuru) ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅರಸಮ್ಮ ದೇವಾಲಯದಲ್ಲಿ ಘಟನೆ ನಡೆದಿದೆ. ಹೊಸದಾಗಿ ಮದುವೆಯಾಗಿದ್ದ ದಂಪತಿ ದೇವಾಲಯಕ್ಕೆ ಹೋಗಿದ್ದರು. ದೇವಾಲಯದ ಒಳಗಿದ್ದ ವ್ಯಕ್ತಿಯು ದಂಪತಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ದೇವರು ಬಂದಂತೆ ನಟಿಸಿ ದೇವಾಲಯಕ್ಕೆ ಬಂದ ದಲಿತ ಕುಟುಂಬವನ್ನು ಹೊರಕಳಿಸಿದ್ದಾನೆ. ಇದನ್ನೂ ಓದಿ: ಪತಿ ಸಾವಿನ ಬಳಿಕ ಪೇದೆ ಕಾಟ, ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ – ಪೊಲೀಸ್ ಸಿಬ್ಬಂದಿ ಪತ್ನಿ ಆತ್ಮಹತ್ಯೆ
ದಲಿತರು ನಿಮಗೆ ಪ್ರವೇಶವಿಲ್ಲ. ಪುಣ್ಯ ಮಾಡಿಸಬೇಕು. ನಡೀ ಆಚೆಗೆ ಎಂದು ಗದರಿಸಿ ಎಂದು ಗದರಿ ಗ್ರಾಮಸ್ಥ ನಾರಾಯಣಪ್ಪ ಎಂಬಾತ ಹೊರಕಳಿಸಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮಸ್ಥರ ನಡವಳಿಕೆಗೆ ಬೇಸತ್ತು ದಂಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮ ಸೇರಿ ಇತರರ ಮೇಲೆ ಎಫ್‌ಐಆರ್ ದಾಖಲಾಗಿದೆ. ದೇವರ ಬಂದಂತೆ ನಾಟಕವಾಡಿದ್ದ ನಾರಾಯಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಎಸ್ಪಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಣರಂಗವನ್ನ ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ವಿರೋಧಿಗಳ ವಿರುದ್ಧ ಸಿಎಂ ಸಮರ

