ನವದೆಹಲಿ: ಚಲನಚಿತ್ರಗಳ ಬಗ್ಗೆ ಯಾವುದೇ ಅನಗತ್ಯ ಟೀಕೆ ಮಾಡದಂತೆ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೂಚಿಸಿದ್ದಾರೆ.
ದೆಹಲಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿ (BJP National Executive Meeting) ಮಂಗಳವಾರ ಮುಕ್ತಾಯವಾಗಿದ್ದು ಮೋದಿ 9 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯ (BJP) ಪ್ಲ್ಯಾನ್ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿರುವ ಸಿನಿಮಾ (Boycott Films) ವಿಚಾರವನ್ನು ಪ್ರಸ್ತಾಪಿಸಿ ನಾಯಕರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ.
Advertisement
Advertisement
ಕೆಲವರು ಕೆಲವು ಚಲನಚಿತ್ರಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಾರೆ. ಅದು ಟಿವಿ ಮತ್ತು ಮಾಧ್ಯಮಗಳಲ್ಲಿ ಇಡೀ ದಿನ ಪ್ರಸಾರವಾಗುತ್ತದೆ. ಹೀಗಾಗಿ ಚಿತ್ರಗಳ ಬಗ್ಗೆ ಯಾವುದೇ ಅನಗತ್ಯ ಟೀಕೆ ಮಾಡಬೇಡಿ ಎಂದು ಮೋದಿ ಹೇಳಿದ್ದಾರೆ.
Advertisement
ಲೋಕಸಭೆ ಚುನಾವಣೆಗೆ ಇನ್ನು 400 ದಿನಗಳಷ್ಟೇ ಬಾಕಿ ಇವೆ. ನಾವು ಜನರನ್ನು ತಲುಪಲು ಅಗತ್ಯವಾದ ಎಲ್ಲಾ ಸೇವೆಗಳನ್ನು ಮಾಡಬೇಕು. ಮತ್ತೊಂದು ಇತಿಹಾಸ ಸೃಷ್ಟಿ ಮಾಡಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೇ ಇಷ್ಟು ದಿನ ಬಿಜೆಪಿ ಅನುಸರಿಸಿಕೊಂಡು ಬರುತ್ತಿದ್ದ ಕಟ್ಟರ್ ಹಿಂದುತ್ವವಾದದ ಬದಲು ಮೃದು ಹಿಂದುತ್ವ ಅನುಸರಿಸುವಂತೆಯೂ ಮೋದಿ ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ವರೆಗೆ BJP ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಮುಂದುವರಿಕೆ
Advertisement
ಮೋದಿ ಹೇಳಿದ್ದೇನು?
ವಿರೋಧ ಪಕ್ಷಗಳನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬೇಡಿ. ಯಾವುದೇ ಕಾರಣಕ್ಕೂ ಅತಿಯಾದ ಆತ್ಮವಿಶ್ವಾಸ ಬೇಡ. ಮೋದಿ ಬರುತ್ತಾರೆ. ಮೋದಿ ಗೆಲ್ಲಿಸುತ್ತಾರೆ ಎನ್ನುವ ಭ್ರಮೆ ಬೇಡ.
ಲೋಕಸಭೆ ಚುನಾವಣೆ ಹೊತ್ತಿಗೆ ಹೊಸ ಮತದಾರರನ್ನು ಸೃಷ್ಟಿಸಿಕೊಳ್ಳಬೇಕು. ಹೊಸ ಮತದಾರರನ್ನು ತಲುಪಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರಮುಖವಾಗಿ 18-25 ವರ್ಷದೊಳಗಿನವರು ನಮ್ಮ ಆದ್ಯತೆ ಆಗಬೇಕು. ಅವರಲ್ಲಿ ಹಿಂದಿನ ರಾಜಕೀಯದ ಜ್ಞಾನ ಕಡಿಮೆ ಇರುತ್ತದೆ.
ಹಿಂದಿನ ಸರ್ಕಾರ ಭ್ರಷ್ಟಾಚಾರ, ತಪ್ಪು ಆಳ್ವಿಕೆಗಳ ಬಗ್ಗೆ ಅರಿವು ನೀಡಿ ಬಿಜೆಪಿಯ ಸುಶಾಸನ್ ಸರ್ಕಾರಗಳ ಸಾಧನೆಗಳನ್ನು ತಿಳಿಸಬೇಕು. ಸುಶಿಕ್ಷಿತ ಮುಸ್ಲಿಮರನ್ನು ಬಿಜೆಪಿ ತಲುಪುವ ಹಾಗೆ ಮಾಡಬೇಕು. ಮುಸ್ಲಿಮರು ನಮಗೆ ವೋಟ್ ಹಾಕುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ಸರ್ಕಾರದ ಅಲ್ಪಸಂಖ್ಯಾತ ಪರವಿರುವ ಯೋಜನೆಗಳನ್ನು ತಿಳಿಸಿ ಅವರ ವಿಶ್ವಾಸವನ್ನು ಗಳಿಸಬೇಕು. ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡಬೇಡಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k