Bengaluru CityCinemaKarnatakaLatestMain PostSandalwood

`ಬಾನದಾರಿಯಲ್ಲಿ’ ಗಣಿ ಜೊತೆ ರೀಷ್ಮಾ ರೊಮ್ಯಾನ್ಸ್

ಚಂದನವನದ ಚೆಂದದ ನಟಿ ರೀಷ್ಮಾ ನಾಣಯ್ಯ `ಏಕ್ ಲವ್ ಯಾ’ ಚಿತ್ರದ ಮೂಲಕ ಗಮನ ಸೆಳೆದ ನಟಿ `ರಾಣಾ’ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ರೀಷ್ಮಾಗೆ ಮತ್ತೊಂದು ಗೋಲ್ಡನ್ ಚಾನ್ಸ್ ಸಿಕ್ಕಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ `ಬಾನದಾರಿಯಲ್ಲಿ’ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಪ್ರೇಮ್ ನಿರ್ದೇಶನದ ʻಏಕ್ ಲವ್ ಯಾʼ ಚಿತ್ರದಲ್ಲಿ ನಟ ರಾಣಾಗೆ ನಾಯಕಿಯಾಗುವ ಮೂಲಕ ಭರವಸೆಯ ನಟಿಯಾಗಿ ಗುರುತಿಸಿಕೊಂಡ್ರು. ಚೊಚ್ಚಲ ಚಿತ್ರ ರಿಲೀಸ್‌ಗೂ ಮುಂಚೆನೇ `ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್‌ಗೆ ʻರಾಣಾʼ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಬೆನ್ನಲ್ಲೇ ಕೊಡಗಿನ ಬ್ಯೂಟಿಗೆ ಗೋಲ್ಡನ್ ಸ್ಟಾರ್ ಜತೆ ರೊಮ್ಯಾನ್ಸ್ ಮಾಡಲು ಗೋಲ್ಡನ್‌ ಚಾನ್ಸ್‌ ಸಿಕ್ಕಿದೆ.

`ಬಾನದಾರಿಯಲ್ಲಿ’ ಅಪ್ಪು ಅವರ ಜನಪ್ರಿಯ ಹಾಡಿನ ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರುಕ್ಮಿಣಿ ವಸಂತ್ ಅವರೊಂದಿಗೆ ರೀಷ್ಮಾ ಜೊತೆಯಾಗುತ್ತಿದ್ದಾರೆ. ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ಪವರ್‌ಫುಲ್ ಪಾತ್ರದಲ್ಲಿ ಮಿಂಚಲಿದ್ದಾರೆ.

 

View this post on Instagram

 

A post shared by Preetham Gubbi (@preetham__gubbi)

ಚಿತ್ರದಲ್ಲಿ ವಿಭಿನ್ನವಾದ ಪ್ರೇಮಕಥೆಯಿದ್ದು, ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಕಾದಂಬರಿ ಪಾತ್ರಕ್ಕೆ ರೀಷ್ಮಾ ಬಣ್ಣ ಹಚ್ಚಲಿದ್ದಾರೆ. ಇನ್ನು ಈ ಚಿತ್ರದ ಬಹುತೇಕ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದೆ. ʻಬಾನದಾರಿಯಲ್ಲಿʼ ಚಿತ್ರೀಕರಣ ಮೇಯಿಂದ ಶುರುವಾಗಲಿದ್ದು, ಆಫ್ರಿಕಾ, ಬೆಂಗಳೂರು, ಚೆನ್ನೈನಲ್ಲಿ ನಡೆಯಲಿದೆ. ಇದನ್ನೂ ಓದಿ: ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

`ಮುಂಗಾರು ಮಳೆ’, `ಮಳೆಯಲಿ ಜೊತೆಯಲಿ’, `ದಿಲ್ ರಂಗೀಲಾ’, `99′ ಚಿತ್ರಗಳನ್ನ ಕೊಟ್ಟಿರೋ ಯಶಸ್ವಿ ಜೋಡಿ ಗಣಿ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್‌ನ ʻಬಾನದಾರಿಯಲ್ಲಿʼ ಚಿತ್ರಕ್ಕೆ ರೀಷ್ಮಾ ಸಾಥ್ ನೀಡ್ತಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Leave a Reply

Your email address will not be published.

Back to top button