ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ‘ಬಿಗ್ ಬಾಸ್’ ಖ್ಯಾತಿಯ ರಜತ್ (Rajath) ಮತ್ತು ವಿನಯ್‌ರನ್ನು (Vinay Gowda) ಮತ್ತೆ ಬಸವೇಶ್ವರ ನಗರದ ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆ ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡಿದ್ದಾರೆ. ಜನ ಕೆಟ್ಟದ್ದು ಕಲಿಯಲಿ ಎಂದು ರೀಲ್ಸ್ ಮಾಡಿಲ್ಲ ಎಂದು ರಜತ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಬ್ಲಡ್ ಕ್ಯಾನ್ಸರ್‌ನಿಂದ ತಮಿಳು ನಟ ಶಿಹಾನ್ ಹುಸೈನಿ ನಿಧನ
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಮತ್ತು ರಜತ್‌ರನ್ನು ನಿನ್ನೆ (ಮಾ.24) ಬಂಧಿಸಿದ್ದರು. ಆ ನಂತರ ಮಧ್ಯಾರಾತ್ರಿ ಅವರನ್ನು ಬಿಡುಗಡೆ ಮಾಡಿದ್ದರು. ಇಂದು ಮತ್ತೆ ವಿಚಾರಣೆಗೆ ಬಂದ ವೇಳೆ ರಜತ್ ಮತ್ತು ವಿನಯ್‌ರನ್ನು ಬಂಧಿಸಿದ್ದಾರೆ. ಠಾಣೆಗೆ ಬರುವ ಮುಂಚೆಯೇ ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ನಮಸ್ಕಾರ, ನಾನು ಮತ್ತು ವಿನಯ್ ರೀಲ್ಸ್ ಮಾಡಿದ್ವಿ. ನಟರಾಗಿ ಆ ರೀಲ್ಸ್ ಮಾಡಿದ್ವಿ ಹೊರತು ಅದರಿಂದ ಜನ ಕೆಟ್ಟದ್ದು ಕಲಿಯಲಿ ಎಂಬ ಉದ್ದೇಶದಿಂದ ಮಾಡಿಲ್ಲ. ನಾವು ನಿನ್ನೆ ಠಾಣೆಯಲ್ಲಿದ್ದ ಕಾರಣ ಟಿವಿ ಸೆಟ್ ಅವರಿಗೆ ಹೇಳಿ ಪ್ರಾಪರ್ಟಿ ತರಿಸಿದ್ವಿ. ಯಾವುದು ಕಳುಹಿಸಿ ಕೊಟ್ರು, ಏನು ಕಳುಹಿಸಿ ಕೊಟ್ರು ಅನ್ನೋದು ನಮಗೂ ಗೊತ್ತಿಲ್ಲ. ಅಷ್ಟು ನೀಟಾಗಿ ನಾವು ಅದನ್ನು ನೋಡಿರಲಿಲ್ಲ. ಅದರಲ್ಲಿ ಏನೋ ತಪ್ಪಾಗಿದೆ ಅಂತ ಬಂತು ಎಂದು ರಜತ್ ಹೇಳಿದ್ದಾರೆ. ಇನ್ನೂ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ನಾವು ಮಾಡಿಲ್ಲ. ಈ ರೀಲ್ಸ್ ಅನ್ನು ಬೇಕಂತ ಮಾಡಿಲ್ಲ ಎಂದು ವಿಡಿಯೋ ಮೂಲಕ ರಜತ್ ಸ್ಪಷ್ಟನೆ ನೀಡಿದ್ದಾರೆ.