ಹಾಸನ: ರೀಲ್ಸ್ ಮಾಡಲು ಹೋಗಿ ಟ್ರ‍್ಯಾಕ್ಟರ್ ಪಲ್ಟಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಬೆಟ್ಟದಲ್ಲಿ ನಡೆದಿದೆ.
ವಿ.ಜಿ.ಕೊಪ್ಪಲು ಗ್ರಾಮದ ಕಿರಣ್ (19) ರೀಲ್ಸ್ ಹುಚ್ಚಿಗೆ ಬಲಿಯಾದ ಯುವಕ. ರೀಲ್ಸ್ಗಾಗಿ ಕಿರಣ್ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ. ಈ ವೇಳೆ ಬೆಟ್ಟದ ತಿರುವಿನಲ್ಲಿ ವೇಗವಾಗಿ ಬಂದ ಟ್ರ್ಯಾಕ್ಟರ್ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಬಿಜೆಪಿ ಕಾರ್ಯಕರ್ತರಿಂದ `ಧರ್ಮ ಉಳಿಸಿ ಯಾತ್ರೆ’
ಪಲ್ಟಿಯಾದ ರಭಸಕ್ಕೆ ಕಿರಣ್ ಮೇಲೆಯೇ ಟ್ರ್ಯಾಕ್ಟರ್ ಉರುಳಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.