ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ಗೆ (Rajath Kishan) ಮತ್ತೆ ಸಂಕಷ್ಟ ಎದುರಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಬಿಗ್‌ಬಾಸ್ (Bigg Boss) ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ (Vinay Gowda) ಖಾಸಗಿ ಕಾರ್ಯಕ್ರಮ ಮುಗಿದ ಬಳಿಕ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಬಸವೇಶ್ವರ ನಗರ (Basaveshwar Nagar) ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.ಇದನ್ನೂ ಓದಿ: ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!
ವಿಚಾರಣೆ ವೇಳೆ ರೀಲ್ಸ್‌ಗೆ ಬಳಸಿದ್ದ ಮಚ್ಚು ಫೈಬರ್ ಎಂದು ಹೇಳಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಅದು ರಿಯಲ್ ಮಚ್ಚು ಎನ್ನುವುದು ಗೊತ್ತಾಗಿತ್ತು. ಇಲ್ಲಿಯವರೆಗೂ ರೀಲ್ಸ್‌ಗೆ ಬಳಸಿದ ಅಸಲಿ ಮಚ್ಚನ್ನು ಪೊಲೀಸರಿಗೆ ಕೊಟ್ಟಿರಲಿಲ್ಲ. ಹಾಗಾಗಿ ಆ ಮಚ್ಚಿನ ಬಗ್ಗೆ ಮಾಹಿತಿ ನೀಡುವಂತೆ ರಜತ್‌ಗೆ ನೋಟಿಸ್ ನೀಡಿದ್ದು, ಇಂದು 11 ಗಂಟೆಗೆ ವಿಚಾರಣೆ ಬರಲು ಸೂಚಿಸಲಾಗಿದೆ.
ಇನ್ನೂ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕೇಸ್‌ನಲ್ಲಿ ಮಾ.24 ರಂದು ಅರೆಸ್ಟ್ ಆಗಿದ್ದ ರಜತ್ ಮತ್ತು ವಿನಯ್ ಗೌಡ ಮಾ.28 ರಂದು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ಇದನ್ನೂ ಓದಿ: ಮಂಡ್ಯ| ಹಣಕಾಸು ವಿಚಾರಕ್ಕೆ ಹಲ್ಲೆಗೊಳಗಾಗಿದ್ದ ಯುವಕ 13 ದಿನಗಳ ಬಳಿಕ ಸಾವು