ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ (B.Ma.Harish) ಮತ್ತು ತಂಡ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿದೆ. ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಮನವಿ ಪತ್ರವೊಂದನ್ನು ನೀಡಿದೆ. ಈ ಮನವಿ ಪತ್ರದಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ ಕಡಿಮೆ ಮಾಡುವುದರ ಜೊತೆಗೆ ಹಲವು ಬೇಡಿಕೆಗಳನ್ನು ಇಡಲಾಗಿದೆ.
Advertisement
ವಾಣಿಜ್ಯ ಮಂಡಳಿ (Film Chamber) ಅಧ್ಯಕ್ಷ ಭಾ.ಮಾ.ಹರೀಶ್, ನಟ ಸುಂದರ್ ರಾಜ್ (Sundaraj), ನಟಿ ಪ್ರಮಿಳಾ ಜೋಷಾಯಿ ಸೇರಿದಂತೆ ಮಂಡಳಿಯ ಪದಾಧಿಕಾರಿಗಳು ಸಿಎಂ ಭೇಟಿ ಮಾಡಿ, ನಿರ್ಮಾಪಕರಿಗೆ ಹಾಗೂ ಪ್ರದರ್ಶಕರಿಗೆ ಪೂರಕ ತಂತ್ರಜ್ಞಾನ ಅಳವಡಿಕೆಗೆ ಮನವಿ ಮಾಡಿದೆ. ಅಂದಾಜು 20 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಡಿಸಿಪಿ ಯಂತ್ರೋಪಕರಣವನ್ನು ಸ್ಥಾಪಿಸಲು ಆಯವ್ಯಯದಲ್ಲಿ ಹಣ ನಿಗದಿ ಮಾಡಬೇಕು ಎಂದು ಕೇಳಿದೆ. ಇದನ್ನೂ ಓದಿ:ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?
Advertisement
Advertisement
ರಾಜ್ಯದಲ್ಲಿ ಸುಮಾರ ಇನ್ನೂರು ತಾತ್ಕಾಲಿಕ ಮತ್ತು ಅರೆ ಖಾಯಂ ಚಿತ್ರಮಂದಿರಗಳನ್ನಾಗಿ ಪರಿವರ್ತಿಸಲು ಬಯಸಿರುವ ಕಾರಣ ನಿಯಮ 107 (2) (1)ಕ್ಕೆ ದಿನಾಂಕ 31 ಡಿಸೆಂಬರ್ 2030ರವರೆಗೆ ವಿಸ್ತರಿಸುವಂತೆ ತಿದ್ದಪಡಿ ತರಲು ಗೃಹ ಇಲಾಖೆಗೆ ನಿರ್ದೇಶಿಸಬೇಕಾಗಿ ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.
Advertisement
ಚಿತ್ರರಂಗವನ್ನು ಕೈಗಾರಿಕಾ ಉದ್ಯಮವೆಂದು ಘೋಷಣೆ ಮಾಡಿದ್ದು, ಪೂರಕ ಇಲಾಖೆಗಳು ಚಿತ್ರರಂಗವನ್ನು ಕೈಗಾರಿಕಾ ಉದ್ಯಮವೆಂದು ಪರಿಗಣಿಸಲು ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲು ಮನವಿ ಕೂಡ ಮಾಡಿಕೊಂಡಿದ್ದಾರೆ. ಜೊತೆ ರಾಜ್ಯಾದ್ಯಂತ ಚಲನಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ನಿಗದಿ ಪಡಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
Web Stories