ಬೀಜಿಂಗ್: ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಕಂಪೆನಿಯು ಮುಂದುಗಡೆ 16 ಎಂಪಿ ಕ್ಯಾಮೆರಾ ಇರುವ ಡ್ಯುಯಲ್ ಸಿಮ್ ಫೋನನ್ನು ಬಿಡುಗಡೆ ಮಾಡಿದೆ.
ರೆಡ್‍ಮೀ ಎಸ್2 ಫೋನನ್ನು ಬಿಡುಗಡೆ ಮಾಡಿದ್ದು, 2 ಮೈಕ್ರಾನ್ ಪಿಕ್ಸೆಲ್ ಜೊತೆಗೆ 16 ಎಂಪಿ ಕ್ಯಾಮೆರಾ, ಹಿಂದುಗಡೆ 12 ಎಂಪಿ ಕ್ಯಾಮೆರಾವನ್ನು ನೀಡಿದೆ. ಸೆಲ್ಫಿ ಪ್ರಿಯರಿಗಾಗಿ ಈ ಫೋನನ್ನು ತಯಾರಿಸಿದ್ದು, ರೆಡ್‍ಮಿಯ ಅತ್ಯುತ್ತಮ ಸೆಲ್ಫಿ ಫೋನ್ ಎಂದು ಕ್ಸಿಯೋಮಿ ತಿಳಿಸಿದೆ.
Advertisement
ರೋಸ್ ಗೋಲ್ಡ್, ಷಾಂಪೇನ್ ಗೋಲ್ಡ್, ಪ್ಲಾಟಿನಂ ಸಿಲ್ವರ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. ಮೆ 17 ರಿಂದ ಚೀನಾ ಆನ್‍ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ. ಸಾಧಾರಣವಾಗಿ ಕ್ಸಿಯೋಮಿ ಫೋನ್ ಹೈಬ್ರಿಡ್ ಸಿಮ್ ಸ್ಲಾಟ್ ಗಳನ್ನು ಹೊಂದಿರುತ್ತದೆ. ಆದರೆ ಇದರಲ್ಲಿ ಎರಡು ಸಿಮ್ ಜೊತೆ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಭಾರತಕ್ಕೆ ಈ ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
Advertisement
Advertisement
Advertisement
ಬೆಲೆ ಎಷ್ಟು?
3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 999 ಯುವಾನ್(ಅಂದಾಜು 10,600 ರೂ). 4 ಜಿಬಿ ರ‍್ಯಾಮ್ /64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 1299 ಯುವಾನ್(ಅಂದಾಜು 13,700 ರೂ) ನಿಗದಿ ಮಾಡಿದೆ.
ಗುಣವೈಶಿಷ್ಟ್ಯಗಳು
ಬಾಡಿ ಮತ್ತು ಡಿಸ್ಪ್ಲೇ:
160.7* 77.3 * 8.1 ಮಿ.ಮೀ., 170 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1440 ಪಿಕ್ಸೆಲ್, 18:9 ಅನುಪಾತ, 269 ಪಿಪಿಐ).
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1(ಓರಿಯೊ), ಕ್ವಾಲಕಂ ಎಂಎಸ್ ಎಂ 8953 ಸ್ನ್ಯಾಪ್ ಡ್ರಾಗನ್ 625 ಪ್ರೊಸೆಸರ್, ಆಕ್ಟಾ ಕೋರ್ 2.0 ಉಊz ಕಾರ್ಟೆಕ್ಸ್-ಎ53 ಸಿಪಿಯು, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 3ಜಿಬಿ ರ‍್ಯಾಮ್/32 ಜಿಬಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ.
ಕ್ಯಾಮೆರಾ ಮತ್ತು ಇತರೇ:
12 ಎಂಪಿ ಹಿಂಭಾಗ, 16 ಎಂಪಿ ಮುಂಭಾಗದ ಕ್ಯಾಮೆರಾ, ಎಲ್‍ಇಡಿ ಫ್ಲಾಶ್, ಫೇಸ್ ಡಿಟೆಕ್ಶನ್ ಆಟೋ ಫೋಕಸ್, ಜಿಯೋ-ಟ್ಯಾಗಿಂಗ್, ಟಚ್ ಫೋಕಸ್. 3080 ಎಂಎಎಚ್ ಬ್ಯಾಟರಿ.