ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿಗೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದ್ದು, ಇದರಿಂದ ಮತ್ತೆ ಬಳ್ಳಾರಿ ಶಾಸಕ ರಾಮುಲು ಏಕಾಂಗಿಯಾಗಿದ್ದಾರೆ.
ಬಳ್ಳಾರಿ ಲೋಕಸಭೆ ಚುನಾವಣೆಗೆ ರಾಮುಲು ಅವರಿಗೆ ಗೆಳೆಯ ಜನಾರ್ದನರೆಡ್ಡಿ ಸಹಾಯದ ಕೊರತೆ ಉಂಟಾಗಿದೆ. ಯಾಕೆಂದರೆ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಕೋರ್ಟ್ ಅನುಮತಿ ನೀಡದಿದ್ದರೂ ಹೊರಗಿನ ಸಹಾಯಕ್ಕೆ ಹೈಕಮಾಂಡ್ ಆಕ್ಷೇಪ ವ್ಯಕ್ತಪಡಿಸಿದೆ.
Advertisement
Advertisement
ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ ಗಾಲಿ ಜನಾರ್ದನರೆಡ್ಡಿ ಬಳ್ಳಾರಿ ಉಪ ಚುನಾವಣೆಯ ಅಖಾಡಕ್ಕೆ ತಲೆಹಾಕಬಾರದು. ಉಪಚುನಾವಣೆಯ ವಿಚಾರದಲ್ಲಿ ಬೆಂಬಲಿಸುವ ಬಹಿರಂಗ ಹೇಳಿಕೆಯನ್ನು ಕೊಡದಂತೆ ನೋಡಿಕೊಳ್ಳಿ. ಕಳೆದ ಬಾರಿ ಬಹಿರಂಗ ಅಖಾಡಕ್ಕೆ ಇಳಿದು ಬಳಿಕ ನಾವು ಸ್ಪಷ್ಟನೆ ಕೊಡಬೇಕಾಗಿ ಬಂತು. ಹಾಗಾಗಿಯೇ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ನಿರೀಕ್ಷಿತ ಸ್ಥಾನ ಸಿಗಲಿಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಮತ್ತು ಶ್ರೀರಾಮುಲುಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ ಎನ್ನಲಾಗುತ್ತಿದೆ.
Advertisement
Advertisement
ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಡಿಮೆ ಸ್ಥಾನ ಬರಲು ರೆಡ್ಡಿ ವಿವಾದ ಕಾರಣವಾಗಿದೆ. ಜನಾರ್ದನರೆಡ್ಡಿ ಆಂತರಿಕವಾಗಿ ಕೆಲಸ ಮಾಡಿದರೆ ಯಾವ ಸಮಸ್ಯೆಯೂ ಆಗುತ್ತಿರಲಲ್ಲಿ. ಆದರೆ ಬಹಿರಂಗವಾಗಿ ಮಾತನಾಡಿ ಮಾಧ್ಯಮಗಳು ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದ್ದವು. ಮಾಧ್ಯಮಗಳನ್ನ ಎದುರಿಸಲಾಗದೇ ರೆಡ್ಡಿಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಡಬೇಕಾಯಿತು ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದೆಯಂತೆ.
ಹಾಗಾಗಿ ಈ ಬಾರಿಯೂ ಜನಾರ್ದನರೆಡ್ಡಿ ಚುನಾವಣೆ ಅಬ್ಬರದಿಂದ ದೂರವಿರಲಿ. ಹೊರಗಿನಿಂದಲೂ ಬಿಜೆಪಿಗೆ ಸಹಕಾರ ನೀಡುವ ಬಗ್ಗೆ ಎಲ್ಲೂ ಮಾತನಾಡಬಾರದು. ನೀವು ಕೂಡ ಜನಾರ್ದನ ರೆಡ್ಡಿಯಿಂದ ಅಂತರವನ್ನು ಕಾಯ್ದುಕೊಂಡು ಚುನಾವಣೆ ಮುಗಿಸಿ ಎಂದು ಬಿಜೆಪಿ ಹೈಕಮಾಂಡ್ ಖಡಕ್ ವಾರ್ನಿಂಗ್ ಕೊಟ್ಟಿದೆ. ಆದ್ದರಿಂದ ಈಗ ಬಳ್ಳಾರಿಯ ಉಪಚುನಾವಣೆಗೆ ಶ್ರೀರಾಮುಲು ಒಬ್ಬರೆ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಬೇಕಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv