– ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 63 ಸಂಸದರು ಸಸ್ಪೆಂಡ್
ನವದೆಹಲಿ: ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಸಂಸದರನ್ನು ಈ ಬಾರಿ ಅಮಾನತು ಮಾಡಲಾಗಿದೆ. 1989 ರಲ್ಲಿ ಅತಿ ಹೆಚ್ಚು ಸಂಸದರು ಅಮಾನತಾಗಿದ್ದರು. ಅದು ಇದವರೆಗಿನ ದಾಖಲೆಯಾಗಿತ್ತು. ಆ ದಾಖಲೆಯೂ ಬ್ರೇಕ್ ಆಗಿದೆ. ಹಾಗಾದರೆ ಯಾವ್ಯಾವ ಅವಧಿಯಲ್ಲಿ ಎಷ್ಟು ಸಂಸದರ ಅಮಾನತಾಗಿತ್ತು ಎಂಬ ವಿವರ ಇಲ್ಲಿದೆ.
Advertisement
2023ರಲ್ಲಿ 92 ಸಂಸದರು ಅಮಾನತು
ಡಿಸೆಂಬರ್ 13 ರಂದು ಉಂಟಾದ ಭದ್ರತಾ ಲೋಪ ವಿಚಾರವಾಗಿ ಆಡಳಿತ ಪಕ್ಷ ವಿಪಕ್ಷಗಳ ನಡುವೆ ಗದ್ದಲ ನಡೆಯುತ್ತಿದೆ. ಪ್ರತಾಪ್ ಸಿಂಹ ವಿರುದ್ಧ ಕ್ರಮ ಹಾಗೂ ಸದನದಲ್ಲಿ ಅಮಿತ್ ಶಾ ಉತ್ತರ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಡಿಸೆಂಬರ್ 14 ರಂದು ರಾಜ್ಯಸಭೆಯಲ್ಲಿ ಓರ್ವ ಸಂಸದ ಹಾಗೂ ಲೋಕಸಭೆಯಲ್ಲಿ 13 ಸಂಸದರನ್ನ ಅಮಾನತು ಮಾಡಲಾಗಿತ್ತು. ನಿನ್ನೆ ಮತ್ತೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಇದೆ ವಿಚಾರಕ್ಕೆ ಗದ್ದಲ ಉಂಟಾದ ಕಾರಣ ಲೋಕಸಭೆಯಲ್ಲಿ 33 ಹಾಗೂ ರಾಜ್ಯಸಭೆಯಲ್ಲಿ 45 ಸಂಸದರನ್ನ ಅಮಾನತು ಮಾಡಲಾಗಿದೆ. ಕಳೆದ ವಾರ ಹಾಗೂ ನಿನ್ನೆ ಸೇರಿ ಒಟ್ಟು 92 ಸಂಸದರು ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಲೋಕಸಭೆಯಿಂದ ಮತ್ತೆ 31 ಸಂಸದರು ಅಮಾನತು
Advertisement
Advertisement
1989 – 63 ಸಂಸದರು ಅಮಾನತು
1989 ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 63 ಸಂಸದರನ್ನ ಅಮಾನತುಗೊಳಿಸಲಾಗಿತ್ತು. ಮಾರ್ಚ್ 15, 1989 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಕುರಿತು ತನಿಖೆ ನಡೆಸಿದ್ದ ಠಕ್ಕರ್ ಆಯೋಗದಿಂದ ವರದಿ ಮಂಡನೆ ಮಾಡಲಾಗುತ್ತಿತ್ತು. ಈ ವೇಳೆ ವಿಪಕ್ಷಗಳು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಕಾರಣ 63 ಸಂಸದರನ್ನು ಅಮಾನತು ಮಾಡಲಾಗಿತ್ತು.
Advertisement
2019 – 45 ಸಂಸದರು ಅಮಾನತು
2019 ರಲ್ಲಿ 45 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಎರಡು ದಿನದ ಅವಧಿಯಲ್ಲಿ 45 ಸಂಸದರು ಅಮಾನತುಗೊಂಡಿದ್ದರು. ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಅಂದಿನ ಸ್ಪೀಕರ್ ಸುಮಿತ್ರಾ ಮಹಾಜನ್, ಟಿಡಿಪಿ ಮತ್ತು ಎಐಎಡಿಎಂಕೆಯ 45 ಸಂಸದರನ್ನ ಅಮಾನತು ಮಾಡಿದ್ದರು. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ ಕೇಸ್ – ತನಿಖೆಗೆ ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ವಿಶೇಷ ಸೆಲ್
2015- 25 ಸಂಸದರ ಅಮಾನತು
ಕಲಾಪ ನಡೆಯುವ ವೇಳೆ ಪ್ರತಿಭಟನೆ ನಡೆಸಿದ್ದಕ್ಕೆ ಹಾಗೂ ಭಿತ್ತಿಪತ್ರ ತೋರಿ, ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ 25 ಸಂಸದರನ್ನ ಲೋಕಸಭೆಯಲ್ಲಿ ಅಮಾನತುಗೊಳಿಸಲಾಗಿತ್ತು.
2014- 18 ಸಂಸದರ ಅಮಾನತು
2014ರಲ್ಲಿ ತೆಲಂಗಾಣ ರಾಜ್ಯ ಆಂಧ್ರಪ್ರದೇಶದಿಂದ ಬೇರ್ಪಟ್ಟು ನೂತನ ರಾಜ್ಯವಾಗಿತ್ತು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಸಂಸದರು, ತೆಲಂಗಾಣ ವಿಚಾರವಾಗಿ ಕಲಾಪದಲ್ಲಿ ಗದ್ದಲ ಸೃಷ್ಟಿ ಮಾಡಿದ್ದರು. ಈ ಹಿನ್ನೆಲೆ ಸ್ಪೀಕರ್ ಸುಮಿತ್ರಾ ಮಹಾಜನ್ 18 ಸಂಸದರನ್ನು ಅಮಾನತುಗೊಳಿಸಿದ್ದರು. ಇದನ್ನೂ ಓದಿ: ಕೇಂದ್ರದಲ್ಲಿ ಬೇರೆ ಪಕ್ಷ ಇರ್ತಿದ್ರೆ ಬಿಜೆಪಿ ಇಡೀ ದೆಹಲಿ ಬಂದ್ ಮಾಡ್ತಿತ್ತು: ಸಂಜಯ್ ರಾವತ್