ನವದೆಹಲಿ: ದೇಶದದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದಂತೆ ಇತ್ತ ದಾಖಲೆ ಪ್ರಮಾಣದಲ್ಲಿ ಹವಾ ನಿಯಂತ್ರಕ(ಎಸಿ) ಮಾರಾಟವಾಗುತ್ತಿದೆ.
ಏಪ್ರಿಲ್ ತಿಂಗಳಿನಲ್ಲಿ17.5 ಲಕ್ಷ ಏಸಿ ಮಾರಾಟವಾಗಿದೆ. ಇದು ಇವರೆಗಿನ 1 ತಿಂಗಳಿನ ಸಾರ್ವಕಾಲಿಕ ಗರಿಷ್ಠ ಮಾರಾಟವಾಗಿದೆ. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ 25 ಬಲಿ, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ
Advertisement
Advertisement
ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ದುಪ್ಪಟ್ಟು ಪ್ರಮಾಣದಲ್ಲಿ ಮಾರಾಟವಾಗಿದೆ. ಈ ವರ್ಷ 90 ಲಕ್ಷ ಘಟಕಗಳು ಮಾರಾಟವಾಗಬಹುದು ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘ ಹೇಳಿದೆ.
Advertisement
ದೇಶದಲ್ಲಿ ಪ್ರಮುಖವಾಗಿ 15 ಕಂಪನಿಗಳ ಎಸಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದರಲ್ಲೂ ವೋಲ್ಟಾಸ್, ಪಾನಾಸೋನಿಕ್, ಹಿಟಾಚಿ, ಎಲ್‌ಜಿ, ಹೈಯರ್ ಕಂಪನಿಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.
Advertisement
2020 ರಲ್ಲಿ ಮೊದಲ ಕೊರೊನಾ ಅಲೆ ಇದ್ದರೆ 2021ರಲ್ಲಿ ಎರಡನೇ ಕೊರೊನಾ ಅಲೆ ಇತ್ತು. ಈ ಕಾರಣಕ್ಕೆ ಎಸಿ ಮಾರಾಟ ಕುಸಿತ ಕಂಡಿತ್ತು.