ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಶುಕ್ರವಾರ 92 ವಾರ್ಡ್‍ಗಳಲ್ಲಿ ದಾಖಲೆ ಮಳೆ (Rain) ಆಗಿದೆ.
ಮಳೆ ಅಂದ್ರೇನೇ ಬೆಂಗಳೂರಿಗರು ಬೆಚ್ಚಿಬೀಳುವಂತಾಗಿದೆ. ಒಂದು ಮಳೆಯಿಂದಾದ ಭಾರೀ ಅವಾಂತರ ಮುಗಿಯುವ ಮೊದಲೇ ಮತ್ತೆ ವರುಣ ರಣಾರ್ಭಟ ಶುರು ಆಗಿದೆ. ನಿನ್ನೆ ಒಂದೇ ದಿನಕ್ಕೆ ಬೆಂಗಳೂರಿನ 8 ವಲಯಗಳಲ್ಲಿ ವರುಣನ ಆರ್ಭಟ ಅತಿ ಹೆಚ್ಚಿದ್ದು, ಯಲಹಂಕ 75.5 ಮಿ.ಮೀ, ಅಟ್ಟೂರು 70 ಮಿ.ಮೀ, ಚೌಡೇಶ್ವರಿ ವಾರ್ಡ್ 67.5 ಮಿ.ಮೀ, ಆರ್.ಆರ್.ನಗರ 66.5 ಮಿ.ಮೀ, ಸಂಪಗಿರಾಮನಗರದಲ್ಲಿ 66 ಮಿ.ಮೀ ಮಳೆ ಆಗಿದೆ.
Advertisement
Advertisement
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನು 5 ದಿನ ಭಾರಿ ಮಳೆ ಆಗಲಿದೆ. ಹೀಗಾಗಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮಳೆ ಮತ್ತೆ ಅವಾಂತರದ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕುಂಭಮೇಳದಲ್ಲಿ ಮನಸೂರೆಗೊಂಡ ಪುನೀತ್ ಲೇಸರ್ ಶೋ – ಗಂಗಾರತಿ ಕಂಡು ಪುಳಕಿತರಾದ ಭಕ್ತರು
Advertisement
Advertisement
ರಾಜ್ಯ ಹಾಗೂ ರಾಜಧಾನಿಯಲ್ಲಿ ಇನ್ನೈದು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸಿದ್ದು-ಡಿಕೆಶಿಯನ್ನ ಪದೇ ಪದೇ ಜೋಡಿಸಿ ನಿಲ್ಲಿಸುವ ರಾಹುಲ್ – ಜೋಡಣೆ ಅಸಲಿ ಆಟ ಏನ್ ಗೊತ್ತಾ?