ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ (Rain In Bengaluru) ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಮಳೆಯ ಪ್ರಮಾಣ 100 ಮಿ.ಮಿ ದಾಟಿದೆ.
ಮುಂಗಾರು ಪೂರ್ವದ ಮಳೆ ಅಬ್ಬರಕ್ಕೆ ನಗರ ವಾಸಿಗಳು ನಲುಗಿ ಹೋಗಿದ್ದಾರೆ. ನಗರದಾದ್ಯಂತ 103.55 ಮಿ.ಮೀ ಮಳೆ ದಾಖಲಾಗಿದೆ ಎಂಬುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement
Advertisement
ಕೇವಲ ಒಂದು ಗಂಟೆ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ಸಂಜೆ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಬೆಂಗಳೂರಿನಲ್ಲಿ ಸುಮಾರು 118 ಮರಗಳು ಧರೆಗೆ ಉರುಳಿವೆ. ಬೆಂಗಳೂರು ದಕ್ಷಿಣದಲ್ಲಿ 19 ಮರ ಧರೆಗೆ ಉರುಳಿದ್ರೆ, ಯಲಹಂಕ ವಲಯದಲ್ಲಿ 10 ಮರ ಧರೆಗೆ ಉರುಳಿವೆ. 84 ಮರಗಳನ್ನ ಬಿಬಿಎಂಪಿ ತೆರವು ಮಾಡಿದೆ. 128 ಮರದ ಕೊಂಬೆಗಳು ಬಿದ್ದಿವೆ. ಮರ ಧರೆಗೆ ಉರುಳಿರುವ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಎನ್ನಲಾಗಿದೆ. ಇನ್ನು ಭಾರೀ ಗಾಳಿ ಮಳೆಗೆ ಹಲವು ಕಡೆ ಹಾನಿಗಳಾಗಿವೆ.
Advertisement
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ..?
ಹೊರಮಾವು – 80 ಮಿ.ಮೀ ಮಳೆ
ಕೊಡಿಗೇಹಳ್ಳಿ – 78.50 ಮಿ.ಮೀ ಮಳೆ
ವಿದ್ಯಾ ಪೀಠ – 65.5 ಮಿ.ಮೀ ಮಳೆ
ಕೊಟ್ಟಿಗೆಪಾಳ್ಯ – 62 ಮಿ.ಮೀ ಮಳೆ
ಜಕ್ಕೂರು – 56 ಮಿ.ಮೀ ಮಳೆ
Advertisement
ರಾಜಮಹಲ್ ಗುಟ್ಟಹಳ್ಳಿ – 55 .5 ಮಿ.ಮೀ ಮಳೆ
ನಂದಿನಿ ಲೇ ಔಟ್ – 54.50 ಮಿ.ಮೀ ಮಳೆ
ಹಂಪಿನಗರ – 50.50 ಮಿ.ಮೀ
ಕೋರಮಂಗಲ – 50.50 ಮಿ.ಮೀ
ದಯಾನಂದ ನಗರ – 49 ಮಿ.ಮೀ
ಪೀಣ್ಯ ಕೈಗಾರಿಕಾ ಪ್ರದೇಶ – 46 ಮಿ.ಮೀ ಮಳೆ
ಯಲಹಂಕ – 45.50 ಮಿ.ಮೀ ಮಳೆ
ವಿಶ್ವನಾಥ್ ನಾಗೇನಹಳ್ಳಿ – 44.50 ಮಿ.ಮೀ ಮಳೆ
ಚಾಮರಾಜಪೇಟೆ – 43. 50 ಮಿ.ಮೀ ಮಳೆ
ಇತ್ತ ಆನೇಕಲ್ ತಾಲೂಕಿನಾದ್ಯಂತ ಅಬ್ಬರದ ಮಳೆಯಾಗಿದೆ. ಕಳೆದೊಂದು ಗಂಟೆಯಿಂದ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಆನೇಕಲ್, ಚಂದಾಪುರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮಳೆಯಾರ್ಭಟ ಮುಂದುವರಿದಿದೆ. ನಿನ್ನೆಯು ಸಹ ಇದೇ ರೀತಿ ಬಾರಿ ಮಳೆ ಸುರಿದಿತ್ತು. ಸಂಜೆಯಾಗುತ್ತಿದ್ದಂತೆ ಮೋಡಕವಿದ ವಾತಾವರಣದ ಜೊತೆಗೆ ಭಾರೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಅಂಗಡಿ-ಮುಂಗಟ್ಟುಗಳ ಬಳಿ ಆಶ್ರಯ ಪಡೆದರು.