ಬೆಂಗಳೂರು: ಚಳಿಗಾಲ ಬಂತು ಸ್ವೆಟರ್ಸ್ (Sweater) ಕೊಡಿ ಪ್ಲೀಸ್ ಎಂದು ಅಂಗಲಾಚುತ್ತಿರುವ 25 ಸಾವಿರ ಬಿಬಿಎಂಪಿ (BBMP) ಶಾಲಾ ಮಕ್ಕಳ ಕೂಗು ಪಾಲಿಕೆ ಆಡಳಿತಕ್ಕೆ ಕೇಳಿಸದಿರುವುದು ಮಾತ್ರ ದುರಂತವೇ ಸರಿ. ಸ್ವೆಟರ್ಸ್ ಕೊಡದೆ ಅದರ ಹಣವನ್ನು ಪೋಷಕರ ಖಾತೆಗೆ ಜಮಾ ಮಾಡಲು ಮುಂದಾಗಿರುವ ಬಿಬಿಎಂಪಿ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Advertisement
ಚಳಿಗಾಲ ಸಮೀಪಿಸುತ್ತಿದೆ. ಹಿಂದೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸ್ವೆಟರ್ಸ್‍ಗಳು ಹಾಳಾಗಿ ಮೂಲೆ ಸೇರಿವೆ. ಮಕ್ಕಳು ನಡುಗುತ್ತಾ ಶಾಲೆಗೆ ಬರಬೇಕಾಗಿದೆ. ಇಷ್ಟಾದರೂ ಬಿಬಿಎಂಪಿ ಮಾತ್ರ ಶಾಲಾ ಮಕ್ಕಳಿಗೆ ಸ್ವೆಟರ್ಸ್ ವಿತರಣೆಗೆ ಗಮನ ಕೊಡದೆ ಕಾಲಹರಣ ಮಾಡ್ತಿದೆ. ಅರ್ಧ ವರ್ಷವೇ ಮುಗಿದ್ರೂ ಸಿಗದ ಸ್ವೆಟರ್ಸ್ ಗಳಿಗಾಗಿ 25 ಸಾವಿರ ಮಕ್ಕಳು ಜಾತಕಪಕ್ಷಿಗಳಂತಾಗಿದ್ದಾರೆ. ಶಾಲೆಗಳತ್ತ ಹೋದ್ರೆ ಸಾಕು, ನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್..ಪ್ಲೀಸ್.. ಎಂದು ಅಂಗಲಾಚುತ್ತಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಕೋತಿಗಳ ಕಾಟ- ಕೈಯಲ್ಲಿರೋ ಬ್ಯಾಗನ್ನೂ ಬಿಡದೇ ಚೆಲ್ಲಾಟ
Advertisement
Advertisement
ಚಳಿಗಾಲ (Winter) ಶುರುವಾದ್ರೂ ಬಿಬಿಎಂಪಿ ಶಾಲೆಯ ಬರೋಬ್ಬರಿ 25 ಸಾವಿರ ಮಕ್ಕಳಿಗೆ ಇನ್ನೂ ಸ್ವೆಟರ್ಸ್ ವಿತರಣೆಯಾಗಿಲ್ಲ. ಸ್ವೆಟರ್ಸ್ ವಿತರಣೆಯಲ್ಲಿ ಸೃಷ್ಟಿಯಾಗಿರುವ ಗೊಂದಲಕ್ಕೆ ಪರಿಹಾರವೇನು? ಎಂದು ಕೇಳಿದ್ರೆ ಹೊಸದೊಂದು ಪ್ಲಾನ್ ಹಾಕ್ಕೊಂಡು ಕೂತಿದ್ದೇವೆ ಅಂತಾರೆ ಪಾಲಿಕೆ ಅಧಿಕಾರಿಗಳು. ಅವರ ಪ್ರಕಾರ ರೀ ಟೆಂಡರ್ ಕರೆದು ಸ್ವೆಟರ್ಸ್ ಕೊಡೋದಕ್ಕೆಲ್ಲಾ 2-3 ತಿಂಗ್ಳಾಗುತ್ತದೆ. ಹಾಗಾಗಿ ಟೆಂಡರ್ ಸಹವಾಸವೇ ಬೇಡ. ಮಕ್ಕಳ ಪೋಷಕರ ಖಾತೆಗೆ ಸ್ವೆಟರ್ಸ್‍ಗೆ ನಿಗದಿಯಾಗಿರುವಷ್ಟು ಹಣವನ್ನು ಜಮಾ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳುತ್ತಾರೆ.
Advertisement
ಬಿಬಿಎಂಪಿ ಏನೋ ಪೋಷಕರು ಅಥವಾ ಮಕ್ಕಳ ಖಾತೆಗೆ ಹಣ ಹಾಕೋ ಪ್ಲಾನ್‍ನಲ್ಲಿದೆ. ಆದರೆ ಖಾತೆಗೆ ಹಣ ಹಾಕಿದ್ರೆ ನಿಜಕ್ಕೂ ಮಕ್ಕಳು ಅದರಲ್ಲಿ ಸ್ವೆಟರ್ ಖರೀದಿ ಸಾಧ್ಯನಾ ಅನ್ನೊದೇ ಪ್ರಶ್ನೆ. ಕಾರಣ ಬಿಬಿಎಂಪಿ ಶಾಲೆಯಲ್ಲಿ ಓದೋ ಮಕ್ಕಳು ಬಹುತೇಕ ಬಡವರ ಮಕ್ಕಳು, ಈ ಹಣವನ್ನೂ ಬೇರೆ ಉದ್ದೇಶಕ್ಕೆ ಬಳಸಿಕೊಂಡ್ರೆ ಮಕ್ಕಳಿಗೆ ಸ್ವೆಟರ್ ಕೊಡಿಸಲ್ಲ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಇದರ ಮಧ್ಯ ಬಿಬಿಎಂಪಿ ಪ್ರತಿಮಕ್ಕಳ ಖಾತೆಗೆ 650 ರೂಪಾಯಿ ವರ್ಗಾವಣೆ ಮಾಡಲು ಸಿದ್ಧತೆ ನಡೆಸ್ತಿದೆ. ಮುಂದಿನ ಶೈಕ್ಷಣೆಕ ವರ್ಷದಿಂದ ಶೂ, ಸಾಕ್ಸ್ ಗೂ ಇದೆ ರೀತಿ ಮಾಡುವ ಪ್ಲ್ಯಾನ್‍ನಲ್ಲಿದೆ.
ಒಟ್ಟಾರೆ ಮಕ್ಕಳ ಪೋಷಕರ ಖಾತೆಗಳಿಗೆ ಹಣವನ್ನು ಜಮಾ ಮಾಡಿ ಅವರೇ ಸ್ವೆಟರ್ಸ್ ಕೊಳ್ಳುವಂತೆ ಮಾಡಲು ಹೊರಟಿರುವ ವಿನೂತನ ವ್ಯವಸ್ಥೆಯಿಂದ ಪ್ರಯೋಜನಗಳಿಗಿಂತ ಸಮಸ್ಯೆನೇ ಹೆಚ್ಚಾಗುವ ಆತಂಕವಿದೆ. ಅಲ್ಲದೇ ಇನ್ನೂ ಬಿಬಿಎಂಪಿ ಅಧಿಕಾರಿಗಳು ಈ ಯೋಜನೆಯಿಂದ ಮತ್ತೆಷ್ಟು ಮಕ್ಕಳಿಗೆ ಹಣ ವಂಚನೆ ಮಾಡ್ತಾರೋ ಅನ್ನೋದೇ ಸಾರ್ವಜನಿಕರ ಪ್ರಶ್ನೆ.