ತ್ರಿಬಲ್ ಆರ್ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ರಾಮ್ ಆಕ್ಟಿಂಗ್ ಗತ್ತು, ಸ್ಟೈಲ್ ಗಮ್ಮತ್ತು ಎಲ್ಲವೂ ಫ್ಯಾನ್ಸ್ ಗೆ ಅಚ್ಚುಮೆಚ್ಚು. ಆಸ್ಕರ್ ಅಂಗಳದಲ್ಲಿ ರಾಮ್ ಹಾಗೂ ಪತ್ನಿ ಉಪಾಸನಾ (Upasana) ನಡೆದುಕೊಂಡ ರೀತಿ, ಡ್ರೆಸ್ಟಿಂಗ್ ಸ್ಟೈಲ್ ಎಲ್ಲವೂ ನೋಡುಗರ ಗಮನಸೆಳೆದಿತ್ತು. ವಿದೇಶಿ ನೆಲದಲ್ಲಿ ಭಾರತೀಯ ಧರಿಸು ಸೀರೆಯಲ್ಲಿ ಉಪಾಸನಾ, ರಾಜಮೌಳಿ ಪತ್ನಿ ಎಲ್ಲರೂ ಕಂಗೊಳಿಸಿದ್ದರು. ಪ್ರತಿಷ್ಠಿತ ಆಸ್ಕರ್ (Oscar) ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕುವುದಕ್ಕೂ ಮುನ್ನ ರಾಮ್ ಉಪಾಸನಾ ಜೋಡಿ ಕಾರ್ಯಕ್ರಮಕ್ಕೆ ತಯಾರಾದ ವಿಡಿಯೋವೊಂದನ್ನು ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.
Advertisement
ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಆಸ್ಕರ್ ಗೂ ಮೊದಲು ಹೇಗೆಲ್ಲಾ ರೆಡಿಯಾದರೂ ಎಂಬುದನ್ನು ತೋರಿಸಲಾಗಿತ್ತು. ರಾಮ್ ಬಟ್ಟೆಗಳನ್ನು ಹೇಗೆಲ್ಲಾ ತಯಾರಿಸಲಾಗಿದೆ. ಬಟ್ಟೆಯ ಗುಣಮಟ್ಟ ವಿನ್ಯಾಸ, ರೆಡಿಯಾಗಿ ದೇವರಿಗೆ ನಮಸ್ಕರಿಸುವ ಪದ್ದತಿ ಎಲ್ಲದರ ವಿಡಿಯೋ ತುಣುಕಿನಲ್ಲಿ ತೋರಿಸಲಾಗಿತ್ತು. ಈ ವಿಡಿಯೋ ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ 6.5 ಮಿಲಿಯನ್ಸ್ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿದೆ. ಈ ಯೂಟ್ಯೂಬ್ ಚಾನೆಲ್ ನಲ್ಲಿ ಅತಿ ಹೆಚ್ಚು ವೀವ್ಸ್ ಪಡೆದಿರುವುದು ಇದೇ ವಿಡಿಯೋ ಅನ್ನೋದೇ ವಿಶೇಷ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ
Advertisement
Advertisement
ರಾಮ್ ಚರಣ್ ಕಪ್ಪು ಬಣ್ಣದ ಉಡುಗೆ ತೊಟ್ಟು ಮಿಂಚಿದ್ದರೆ, ಉಪಾಸನಾ ಬಿಳಿ ಬಣ್ಣದ ಸಿಲ್ಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದರು,. ವಿದೇಶಿ ನೆಲದಲ್ಲಿ ಈ ಜೋಡಿ ದೇವರಿಗೆ ನಮಸ್ಕರಿಸಿ ಹೊರಟ ಬಗೆಗೆ ಬಹಳ ಮೆಚ್ಚುಗೆ ಸಿಕ್ಕಿತ್ತು, ಇದೀಗ ರಾಮ್-ಉಪಾಸನಾ ದಂಪತಿಯ ಆಸ್ಕರ್ ವಿಡಿಯೋ ರೆಕಾರ್ಡ್ ಬರೆದಿದೆ. ಇದು ರಾಮ್ ಚರಣ್ ಜನಪ್ರಿಯತೆಗೆ ಕೈಗನ್ನಡಿ ಎನ್ನಬಹುದು. ಕಲೆ ಕಲಾವಿದನಿಗೆ ಯಾವುದೇ ಬೌಂಡರಿ ಇರೋದಿಲ್ಲ. ಒಬ್ಬ ಕಲಾವಿದನ ಕಲೆ ಆತ ನಡೆದುಕೊಳ್ಳುವ ರೀತಿ ಎಲ್ಲರಿಗೂ ಇಷ್ಟವಾಗಬಹುದು ಎಂಬುದಕ್ಕೆ ಈ ವಿಡಿಯೋ ತಾಜ ಉದಾಹರಣೆಯಷ್ಟೇ.