ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ 9ನೇ ವರದಿಯನ್ನ ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಿದೆ. ವಿಧಾನಸೌಧದ ಸಿಎಂ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ (R.V.Deshapande) ವರದಿಯನ್ನ ಸಿಎಂಗೆ ಸಲ್ಲಿಕೆ ಮಾಡಿದ್ದಾರೆ.
9ನೇ ವರದಿಯಲ್ಲಿ 449 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. 3 ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಈ ವರದಿ ನೀಡಲಾಗಿದೆ ಅಂತ ದೇಶಪಾಂಡೆ ತಿಳಿಸಿದರು. ಪ್ರಮುಖವಾಗಿ ಈ ವರದಿಯಲ್ಲಿ 7 ಬೋರ್ಡ್, ಕಾರ್ಪೊರೇಷನ್‌ಗಳನ್ನು ಮುಚ್ಚಲು ಸಲಹೆ ನೀಡಲಾಗಿದೆ. ಅಲ್ಲದೇ, 9 ಬೋರ್ಡ್ ಕಾರ್ಪೊರೇಷನ್‌ಗಳನ್ನ ವಿಲೀನ ಮಾಡಲು ಶಿಫಾರಸು ಮಾಡಲಾಗಿದೆ. ಇದನ್ನೂ ಓದಿ: ರಾಜ್ಯ ಮಾಹಿತಿ ಆಯುಕ್ತರಾಗಿ ಮೂವರು ಪ್ರಮಾಣ ವಚನ ಸ್ವೀಕಾರ
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೇಶಪಾಂಡೆ, ಬೋರ್ಡ್, ಕಾರ್ಪೊರೇಷನ್‌ಗಳಿಗೆ ಈಗಾಗಲೇ ಅಧ್ಯಕ್ಷರನ್ನ ನೇಮಕ ಮಾಡಿದ್ರೆ ನನಗೆ ಗೊತ್ತಿಲ್ಲ. ಜನರ ಹಣ ಇದು. ಆ ಹಣದ ಉಪಯೋಗ ಜನರಿಗೆ ಆಗಬೇಕು. ಇವತ್ತಿನ ಕಾಲದಲ್ಲಿ ಅವಶ್ಯಕತೆ ಇಲ್ಲದ ಬೋರ್ಡ್ ಮುಚ್ಚಲು ಹೇಳಿದ್ದೇವೆ. ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಸಿಎಂ ಅಂಗೀಕಾರ ಮಾಡೋದಾಗಿ ಹೇಳಿದ್ದಾರೆ. ನೋಡೋಣ ಏನ್ ಮಾಡ್ತಾರೆ ಎಂದು ತಿಳಿಸಿದರು.
84 ಬೋರ್ಡ್, ಕಾರ್ಪೊರೇಷನ್‌ಗಳ ರಿವ್ಯೂ ಮಾಡಿದ್ದೇವೆ. ಆ ಬೋರ್ಡ್‌ಗಳ A-Z ಮಾಹಿತಿ ನಮ್ಮ ಬಳಿ ಇದೆ. ಇದರಲ್ಲಿ 7 ಮುಚ್ಚಲು, 9 ಮರ್ಜ್ ಮಾಡಲು ಶಿಫಾರಸು ಮಾಡಿದ್ದೇವೆ. ನಮ್ಮ ಜವಾಬ್ದಾರಿ ಮಾಡಿದ್ದೇವೆ. ಮಿಕ್ಕಿದ್ದು ಸರ್ಕಾರ ಮಾಡಬೇಕು. ಮುಚ್ಚಲು ಹೇಳಿರೋ ಬೋರ್ಡ್‌ನಲ್ಲಿ ಕೆಲಸವೇ ಇಲ್ಲ. ಕೆಲವು ಬೋರ್ಡ್‌ಗೆ ಹಣವೇ ಇಲ್ಲ. ಹೀಗಾಗಿ, ಮುಚ್ಚಲು ಶಿಫಾರಸು ಮಾಡಿದ್ದೇವೆ. ಉಳಿದ ಬೋರ್ಡ್, ಕಾರ್ಪೊರೇಷನ್ ಅಭಿವೃದ್ಧಿ, ಸುಧಾರಣೆ ಹೇಗೆ ಮಾಡಬೇಕು ಅಂತ 379 ಶಿಫಾರಸು ಮಾಡಿದ್ದೇವೆ. 15 ಶಿಫಾರಸು ಭೂಸ್ವಾಧೀನ ಮಾಡಿದ್ದೇವೆ. ಸಾಮಾನ್ಯ ಆಡಳಿತಾತ್ಮಕ-ಇ ಸುಧಾರಣೆಗೆ 55 ಶಿಫಾರಸು ಮಾಡಿದ್ದೇವೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಇದನ್ನೂ ಓದಿ: ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್
ವಿಲೀನ ಮಾಡಲು ಸೂಚಿಸಿರೋ ನಿಗಮಗಳು
1.ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ
(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೋಂದಿಗೆ ವೀಲಿನ)
2.ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ನಿಯಮಿತ
(ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್ ವಿಲೀನ ಮಾಡಬೇಕು)
3.ಆಹಾರ ಕರ್ನಾಟಕ ಲಿಮಿಟೆಡ್
(ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತದಲ್ಲಿ ವಿಲೀನ)
4.ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಂಪನಿ ಲಿಮಿಟೆಡ್ (ಬಿ-ರೈಡ್)
(ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್))
5.ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
(ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ)
6.ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪನಿ ಲಿಮಿಟೆಡ್
(ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್‌ನಲ್ಲಿ ವಿಲೀನ)
7.ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ
(ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ)
8.ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ)
9.ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಸಿಎಡಿಎ)
(ಸಂಬಂಧಿಸಿದ ನೀರಾವರಿ ನಿಗಮಗಳು)
ಮುಚ್ಚಲು ಶಿಫಾರಸು ಮಾಡಲಾದ 7 ಬೋರ್ಡ್ ಕಾರ್ಪೋರೇಷನ್‌ಗಳು!?
1.ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಮಂಡಳಿ
2.ಕರ್ನಾಟಕ ರಾಜ್ಯ ಸಂಯಮ ಮಂಡಳಿ
3.ಕರ್ನಾಟಕ ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ
4.ಕರ್ನಾಟಕ ವುಲ್ಪ್ ವುಡ್ ಲಿಮಿಟೆಡ್
5.ಕರ್ನಾಟಕ ರಾಜ್ಯ ಅಗ್ರೋ-ಕಾರ್ನ್ ಪ್ರಾಡಕ್ಟ್ ಲಿಮಿಟೆಡ್
6.ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್
7.ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್