ಬೆಂಗಳೂರು: ಮಂಗಳವಾರದಿಂದ ವಿಧಾನಸೌಧದ (Vidhana Soudha) ಲಾಂಜ್‌ನಲ್ಲಿ ಶಾಸಕರಿಗೆ 17 ಆರಾಮ ಆಸನಗಳ ಸೌಲಭ್ಯ ಸಿಗಲಿದೆ.
ಸ್ಪೀಕರ್ ಯುಟಿ ಖಾದರ್ (Speaker UT Khader) ಆದೇಶದಂತೆ ವಿಧಾನಸಭೆಯ ಮೊಗಸಾಲೆಯಲ್ಲಿ 15 ರಿಕ್ಲೈನರ್ (Recliner Chair) ಮತ್ತು 2 ಮಸಾಜ್ ಚೇರ್‌ಗಳನ್ನು (Massage Chair) ವಿಧಾನಸಭೆ ಸಚಿವಾಲಯ ಅಳವಡಿಸಿದೆ.
Advertisement
ಈ ಚೇರ್‌ಗಳನ್ನು ಬಾಡಿಗೆಗೆ ತರಲಾಗಿದೆ. 1 ರಿಕ್ಲೈನರ್ ಚೇರ್‌ಗೆ ದಿನಕ್ಕೆ 1,200 ರೂ. ಇದ್ದರೆ 1 ಮಸಾಜ್ ಚೇರ್‌ಗೆ 10 ಸಾವಿರ ರೂ. ದರ ನಿಗದಿ ಮಾಡಲಾಗಿದೆ. 15 ದಿನದಲ್ಲಿ ಇದಕ್ಕೆಂದು 5.70 ಲಕ್ಷ ರೂಪಾಯಿ ವೆಚ್ಚ ಮಾಡಲಿದೆ. ಇದನ್ನೂ ಓದಿ: ಶಾಸಕರ ಸಂಬಳ ಹೆಚ್ಚಳಕ್ಕೆ ತೀರ್ಮಾನ – ಈಗ ಎಷ್ಟಿದೆ? ಎಷ್ಟು ಏರಿಕೆ ಆಗುತ್ತೆ?
Advertisement
Advertisement
ವಿಧಾನಭೆಯ ಸ್ಪೀಕರ್ ಯುಟಿ ಖಾದರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಮಧ್ಯಾಹ್ನದ ಬಳಿಕ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ಅವರು ಕೆಲ ಕಾಲ ವಿಶ್ರಾಂತಿ ಪಡೆದು ಕಲಾಪಕ್ಕೆ ಹಾಜರಾಗಿ ಸದನಕ್ಕೆ ಹಾಜರಾಗುವಂತೆ ಮಾಡಲು ರಿಕ್ಲೈನರ್ ಕುರ್ಚಿಗಳನ್ನು ಬಾಡಿಗೆ ಪಡೆಯುವ ತೀರ್ಮಾನವನ್ನು ಕೈಗೊಂಡಿದ್ದರು.
Advertisement
ಈ ಬಗ್ಗೆ ಖಾದರ್ ಪ್ರತಿಕ್ರಿಯಿಸಿ, ಶಾಸಕರಾಗಿ ಶಾಸಕರಿಗೆ ಸೌಲಭ್ಯಗಳನ್ನು ಒದಗಿಸುವುದು ನನ್ನ ಜವಾಬ್ದಾರಿ. ರೆಕ್ಲೈನರ್ ಕುರ್ಚಿ ಐಷಾರಾಮಿ ಅಲ್ಲ, ಅದು ಅವಶ್ಯಕತೆಯಾಗಿದೆ. ಎಲ್ಲಾ ಶಾಸಕರು ಚಿಕ್ಕವರಲ್ಲ ಮತ್ತು ಎಲ್ಲರೂ ಆರೋಗ್ಯವಂತರಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಟೀಕಿಸುವವರು ಶಾಸಕರು ಅಥವಾ ಸಂಸದರನ್ನು ಶತ್ರುಗಳಂತೆ ನೋಡಬಾರದು, ಅವರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು. ಬಿಜೆಪಿ ಶಾಸಕರಿಂದಲೂ ಈ ಬೇಡಿಕೆ ಬಂದಿತ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.