ಹೋಟೆಲ್ ಅಡುಗೆ ಎಂದರೆ ಹಲವರು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹೋಟೆಲ್‌ಗಳಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಬದಲಾಗಿ ನಾವೇ ಮನೆಯಲ್ಲಿಯೇ ಆರೋಗ್ಯಕರವಾದ ಆಹಾರವನ್ನು ತಯಾರಿಸಿ ಸೇವಿಸ ಬಹುದಾಗಿದೆ. ಮಶ್ರೂಮ್ ಮಸಾಲ ಮಾಡಿದರೆ ಮನೆಮಂದಿಯ ಜೊತೆಗೆ ಕುಳಿತು ಸೇವಿಸಬಹುದಾಗಿದೆ.
ಮಶ್ರೂಮ್ ಅನ್ನು ಇಷ್ಟ ಪಡುತ್ತಿರಿ ಎಂದಾದರೆ ಹಾಗೂ ಆರೋಗ್ಯಯುಕ್ತವಾಗಿರುವ ಪದಾರ್ಥಗಳನ್ನು ಬಳಸಿಕೊಂಡು ಕೆಲವು ಡಿಶ್ ಅನ್ನು ತಯಾರಿಸಲು ನೀವು ಬಯಸುವಿರಿ ಎಂದಾದರೆ, ಖಂಡಿತವಾಗಿಯೂ ಮಶ್ರೂಮ್ ಮಸಾಲವನ್ನು ಮಾಡಲು ಒಮ್ಮೆ ಟ್ರೈ ಮಾಡಿ.
Advertisement
Advertisement
ಬೇಕಾಗುವ ಪದಾರ್ಥಗಳು
* ಅಣಬೆ- ೨೦೦ ಗ್ರಾಂ
* ಗಸಗಸೆ- ೧ ಚಮಚ
* ಗೋಡಂಬಿ- ೬-೭
* ಹಸಿಮೆಣಸಿನ ಕಾಯಿ-೩
* ಕಾಯಿ ತುರಿ- ಅರ್ಧ ಬಟ್ಟಲು
* ಎಣ್ಣೆ- ೩ ಚಮಚ
* ಚಕ್ಕ, ಲವಂಗ-ಸ್ವಲ್ಪ
* ಪಲಾವ್ ಎಲೆ- ೨
* ಜೀರಿಗೆ – ೧ ಚಮಚ
* ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ೧
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
* ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಬಟ್ಟಲು
* ಅರಿಶಿಣದ ಪುಡಿ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ದನಿಯಾ ಪುಡಿ- ಅರ್ಧ ಚಮಚ
* ಖಾರದ ಪುಡಿ – ೧ ಚಮಚ
* ಜೀರಿಗೆ ಪುಡಿ – ಕಾಲು ಚಮಚ
* ತುಪ್ಪ- ೨ ಚಮಚ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಗರಂ ಮಸಾಲಾ ಪುಡಿ – ಅರ್ಧ ಚಮಚ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಿಕ್ಸಿ ಜಾರ್‌ಗೆ ಗಸಗಸೆ, ಗೋಡಂಬಿ, ಹಸಿಮೆಣಸಿನ ಕಾಯಿ ಹಾಗೂ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
* ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಜೀರಿಗೆ ಹಾಗೂ ಈರುಳ್ಳಿ, ಟೊಮೆಟೊವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
* ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣದ ಪುಡಿ, ಉಪ್ಪು, ದನಿಯಾ ಪುಡಿ, ಖಾರದ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ೨-೩ ನಿಮಿಷ ಕುದಿಯಲು ಬಿಡಿ.
* ನಂತರ ಅಣಬೆ ಹಾಗೂ ರುಬ್ಬಿಕೊಂಡ ಮಿಶ್ರಣ ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ ಕುದಿಯಲು ಬಿಡಿ.
* ಪ್ಯಾನ್ ಒಂದಕ್ಕೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ಇದನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಶ್ರೂಮ್ ಮಾಸಾಲಾ ಸವಿಯಲು ಸಿದ್ಧವಾಗುತ್ತದೆ.