ಬರ್ಲಿನ್: ಜರ್ಮನಿಯಲ್ಲಿ (Germany) ಕುಟುಂಬಗಳು ಖರ್ಚು ವಚ್ಚಗಳನ್ನು ಬಿಗಿಗೊಳಿಸಿರುವ ಹಿನ್ನೆಲೆ ಈ ವರ್ಷದ ತ್ರೈಮಾಸಿಕದಲ್ಲಿ ಆರ್ಥಿಕತೆಯಲ್ಲಿ ಹಿಂಜರಿತ (Recession) ಕಂಡಿದೆ.
ಗುರುವಾರ ಜರ್ಮನಿಯ ಅಂಕಿಅಂಶಗಳ ಕಚೇರಿ ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ವರದಿಯನ್ನು ಬಿಡುಗಡೆಗೊಳಿಸಿದೆ. ಜಿಡಿಪಿ (GDP) ಬೆಳವಣಿಗೆ ದರ 0.3%ಕ್ಕೆ ಇಳಿದಿದ್ದು, ಇದೀಗ ಜರ್ಮನಿ ಆರ್ಥಿಕ ಹಿಂಜರಿತದ ಹಾದಿಯಲ್ಲಿದೆ.
Advertisement
Advertisement
Advertisement
2022ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಜರ್ಮನಿಯ ಜಿಡಿಪಿ 0.5% ರಷ್ಟು ಇಳಿಕೆಯಾಗಿತ್ತು. ಇದಾದ ಬಳಿಕ ಗುರುವಾರ ಬಿಡುಗಡೆಯಾಗಿರುವ ಜಿಡಿಪಿಯಲ್ಲಿಯೂ ಕುಸಿತ ಕಂಡಿದೆ. ಸತತ ಎರಡು ತ್ರೈಮಾಸಿಕಗಳ ಜಿಡಿಪಿ ಕುಸಿತವಾದರೆ ಅದನ್ನು ತಾಂತ್ರಿಕ ಹಿಂಜರಿತ ಎಂದು ಕರೆಯಲಾಗುತ್ತದೆ.
Advertisement
ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಮಾಸ್ಕೋದೊಂದಿಗೆ ಸಂಬಂಧಗಳನ್ನು ಕಡಿತಗಿಳಿಸುವ ನಾಯಕರ ನಿರ್ಧಾರದಿಂದ ಯುರೋಪ್‌ನ ಅತಿ ದೊಡ್ಡ ಆರ್ಥಿಕತೆ ಇದೀಗ ಒತ್ತಡದಲ್ಲಿದೆ. ಕೆಲ ಅಂಕಿ ಅಂಶಗಳ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ ಜರ್ಮನ್‌ನಲ್ಲಿ ನಾಗರಿಕರು ತಮ್ಮ ಗೃಹಬಳಕೆಯ ಖರ್ಚನ್ನು ತೀವ್ರವಾಗಿ ಕಡಿಮೆ ಮಾಡಿದ್ದಾರೆ. ಗ್ರಾಹಕರು ತಮ್ಮ ಹಣವನ್ನು ಬಟ್ಟೆ, ಪೀಠೋಪಕರಣ, ವಾಹನ ಸೇರಿದಂತೆ ದುಬಾರಿ ವಸ್ತುಗಳಿಗಾಗಿ ವ್ಯಯಿಸಲು ಇಷ್ಟಪಡುತ್ತಿಲ್ಲ. ಈ ಹಿನ್ನೆಲೆ ಅಂತಿಮ ಬಳಕೆಯ ವೆಚ್ಚ 1.2% ರಷ್ಟು ಕುಸಿದಿದೆ. ಇದನ್ನೂ ಓದಿ: ಸಂಸತ್ ಕಟ್ಟಡವನ್ನು ರಾಷ್ಟ್ರಪತಿ ಉದ್ಘಾಟಿಸಲಿ: ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ
ಕಳೆದ ವರ್ಷದ ಕೊನೆಯಲ್ಲಿ ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಸಿಲುಕಿಕೊಂಡಿತು. ಇದಕ್ಕೆ ಮುಖ್ಯ ಕಾರಣ ಇಂಧನ ಬೆಲೆಯಲ್ಲಿನ ಏರಿಕೆ. ಈ ಹಿನ್ನೆಲೆ ಗ್ರಾಹಕರು ತಮ್ಮ ಖರ್ಚು ವೆಚ್ಚಗಳನ್ನು ಮಿತವಾಗಿ ಬಳಸುತ್ತಿದ್ದಾರೆ ಎಂದು ಪ್ಯಾಂಥಿಯಾನ್ ಮ್ಯಾಕ್ರೋ ಎಕನಾಮಿಕ್ಸ್‌ನ ಮುಖ್ಯ ಯೂರೋ ವಲಯದ ಅರ್ಥಶಾಸ್ತ್ರಜ್ಞ ಕ್ಲಾಸ್ ವಿಸ್ಟೆಸೆನ್ ತಿಳಿಸಿದ್ದಾರೆ. ಇದನ್ನೂ ಓದಿ: IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?