ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ವಿಶ್ವದ ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯ ಕೋರಿದ್ದಾರೆ. ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ ಎಂದು ಮೋದಿ ಅವರು ಸಂದೇಶ ನೀಡಿದ್ದಾರೆ.
Advertisement
ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು! ಏಸು ಕ್ರಿಸ್ತರ ಜೀವನ, ಉದಾತ್ತ ಸಂದೇಶಗಳನ್ನು ನಾವು ನೆನೆಯೋಣ. ಸೇವೆ, ದಯೆ, ನಮ್ರತೆಯನ್ನು ಯೇಸು ಕ್ರಿಸ್ತರ ಸಂದೇಶಗಳು ಪ್ರತಿಪಾದಿಸಿವೆ. ಎಲ್ಲರೂ ಆರೋಗ್ಯ, ಸಾಮರಸ್ಯದಿಂದಿರಿ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್ ಕಲಾಕೃತಿ
Advertisement
Christmas greetings to everyone! We recall the life and noble teachings of Jesus Christ, which placed topmost emphasis on service, kindness and humility. May everyone be healthy and prosperous. May there be harmony all around.
— Narendra Modi (@narendramodi) December 25, 2021
Advertisement
ನಾಗರಿಕರು, ವಿಶೇಷವಾಗಿ ಕ್ರೈಸ್ತ ಸಹೋದರ-ಸಹೋದರಿಯರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು. ಈ ಸಂತೋಷದಾಯಕ ಸಂದರ್ಭದಲ್ಲಿ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಆಧರಿಸಿ ಸಮಾಜವನ್ನು ನಿರ್ಮಿಸಲು ನಮ್ಮ ಜೀವನದಲ್ಲಿ ಯೇಸು ಕ್ರಿಸ್ತರ ಬೋಧನೆಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರೆ ನೀಡಿದ್ದಾರೆ.
Advertisement
Merry Christmas to fellow citizens, especially to our Christian brothers and sisters, in India and abroad. On this joyous occasion, let us resolve to build a society that is based on the values of justice & liberty and adopt the teachings of Jesus Christ in our lives.
— President of India (@rashtrapatibhvn) December 25, 2021
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು. ಎಲ್ಲ ಆರೋಗ್ಯ, ಸಂತೋಷ ಮತ್ತು ಸಾಮರಸ್ಯವನ್ನು ಬಯಸುತ್ತೇನೆ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ರಾಧೆ ಶ್ಯಾಮ್ ಸಿನಿಮಾದ ಕ್ಲೈಮ್ಯಾಕ್ ಹೈಲೈಟ್ ಆಗಿರುತ್ತೆ: ಪ್ರಭಾಸ್
Christmas greetings to everyone!
Wishing you all health, happiness and harmony. pic.twitter.com/rSk08ronxd
— Rahul Gandhi (@RahulGandhi) December 25, 2021
ವಿಶ್ವದೆಲ್ಲೆಡೆ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕ್ರಿಸ್‌ಮಸ್ ಅದ್ದೂರಿ ಆಚರಣೆಗೆ ತಡೆ ನೀಡಿರುವ ಸರ್ಕಾರಗಳು, ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ಕ್ರಿಸ್‌ಮಸ್ ಆಚರಿಸುವಂತೆ ಜನತೆಗೆ ಸಲಹೆ ನೀಡಿವೆ.