ಬೆಂಗಳೂರು: ಚುನಾವಣೆಗೆ ನಿವೃತ್ತಿ ಘೋಷಿಸಿರುವ ಶಾಸಕ ಅಂಬರೀಶ್ ಸೆಳೆಯಲು ಜೆಡಿಎಸ್ ವಿಫಲವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ರೂ ಜೆಡಿಎಸ್‍ಗೆ ಬೆಂಬಲ ನೀಡಲು ಅಂಬರೀಶ್ ನಿರಾಕರಿಸಿದ್ದಾರೆ. ಈಗ ಚುನಾವಣೆ ಸಂದರ್ಭವಾಗಿರೋದ್ರಿಂದ, ಯಾವುದೇ ನಿರ್ಧಾರ ಕೈಗೊಂಡರೂ ತಪ್ಪು ಸಂದೇಶ ರವಾನೆ ಆಗುತ್ತೆ ಅಂತ ರೆಬಲ್‍ಸ್ಟಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?
Advertisement
Advertisement
ಈಗಿನ ವ್ಯವಸ್ಥೆ ಸರಿಪಡಿಸಲು ತಾವೇ ಮುಖ್ಯಮಂತ್ರಿಯಾಗುವಂತೆ ಅಂಬರೀಶ್ ಸಲಹೆ ನೀಡಿದ್ದಾರೆಂದು ಎಚ್‍ಡಿಕೆ ಬಹಿರಂಗ ಹೇಳಿಕೆ ನೀಡಿದ್ರು. ಇದ್ರಿಂದ ಅಂಬರೀಶ್ ಆಪ್ತರು ಜೆಡಿಎಸ್ ಕಡೆ ಮುಖ ಮಾಡಿದ್ದು, ಅವರ ಪರ ಕೆಲಸ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್ ಭೇಟಿ ಬಗ್ಗೆ ಹೆಚ್‍ಡಿಕೆ ಪ್ರತಿಕ್ರಿಯೆ
Advertisement
Advertisement
ಇತ್ತ ಅಂಬರೀಶ್ ಕುಮಾರಸ್ವಾಮಿ ಭೇಟಿ ಬೆನ್ನಲ್ಲೆ ಮಂಡ್ಯದಲ್ಲಿ ಜೆಡಿಎಸ್ ಮುಖಂಡರು ಆಪರೇಷನ್ ಜೆಡಿಎಸ್ ಗೆ ಮುಂದಾಗಿದ್ದಾರೆ. ಅಂಬಿ ಬೆಂಬಲಿಗರು ಜೆಡಿಎಸ್ ನಾಯಕರ ಜೊತೆ ಮಾತುಕತೆ ಆರಂಭಿಸಿದ್ದಾರೆ. ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಯಾರ ಪರವಾಗಿ ಪ್ರಚಾರಕ್ಕೂ ಹೋಗಲ್ಲ ಎಂದಿದ್ದಾರೆ. ಈ ಮೂಲಕ ಸೈಲೆಂಟ್ ಆಗಿ ದಾಳ ಉರುಳಿಸಿ ತಾವು ಜೆಡಿಎಸ್ ಪರ ಒಲವು ಹೊಂದಿದ್ದೇನೆ ಎಂಬ ಮೆಸೇಜನ್ನು ತಮ್ಮ ಬೆಂಬಲಿಗರಿಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಅಂಬರೀಶ್ ಮತ್ತು ಜೆಡಿಎಸ್ ನಡೆಯಿಂದ ಈಗ ಕಾಂಗ್ರೆಸ್ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಎಚ್‍ಡಿಕೆ- ಅಂಬರೀಶ್ ಭೇಟಿ ವಿಷ್ಯ ನಂಗೆ ಗೊತ್ತಿಲ್ಲ: ಎಚ್.ಡಿ. ದೇವೇಗೌಡ