ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ, ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ – ಅಂಬರೀಶ್

Public TV
2 Min Read
gdg ambareesh

ಗದಗ: ರೆಬೆಲ್ ಸ್ಟಾರ್ ಅಂಬಿಗೆ 60ನೇ ವಸಂತದ ಸಂದರ್ಭದಲ್ಲಿ ಗದಗ ನಗರಕ್ಕೆ ಆಗಮಿಸಿದ್ದರು. ದಿಗ್ಗಜನಿಗೆ ಅದ್ಭುತ ಸ್ವಾಗತ ಕೋರಿ ಗಂಡ-ಬೇರುಂಡ ಲಾಂಚನವಿರುವ ಚಿನ್ನದ ಸರವನ್ನು ಹಾಕಿ `ಕಲಾಭೂಷಣ’ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

2012ರ ಸೆಪ್ಟೆಂಬರ್ 20ರಂದು ಬಜಾರ್ ಭೀಮನಿಗೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಹಾಗೂ ಅಂಬಿ ಅಭಿಮಾನಿ ಬಳಗದಿಂದ ಅದ್ಭುತ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ `ಅಂಬಿ-ಅಭಿನಂದನೆ-ಅಭಿವಂದನೆ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ambarish 2 1

ಈ ಕನ್ವರ್ ಲಾಲ್‍ನ ಕಾರ್ಯಕ್ರಮ ಕಣ್ಣು ತುಂಬಿಕೊಳ್ಳಲು ಚಲನಚಿತ್ರದ ಗಣ್ಯಾತಿ ಗಣ್ಯರನ್ನು ಕರೆತರಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಅಂಬರೀಶ್, ಸಂಕಷ್ಟಗಳ ಮಧ್ಯೆಯೂ ಉತ್ತರ ಕರ್ನಾಟಕದ ಜನತೆ ಈ ನಟನಿಗೆ ತೋರಿದ ಪ್ರೀತಿ, ಗೌರವವನ್ನು ಎಷ್ಟು ಹಣ ಕೊಟ್ಟರೂ ಈ ವಿಶ್ವಾಸ ಗಳಿಸಲಾಗುವುದಿಲ್ಲ. ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ. ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ ಎಂದರು.

gdg ambareesh 3

ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಇವರನ್ನು ಮೆರವಣಿಗೆ ಮಾಡಲಾಗಿತ್ತು. ಅಭಿಮಾನಿಗಳು ನೀಡುವ ಪ್ರೀತಿಯ ಮುಂದೆ ಯಾವ ಪ್ರಶಸ್ತಿ ದೊಡ್ಡದಲ್ಲ. ನನಗೆ ಅಧಿಕಾರದ, ಹಣದ ದಾಹವಿಲ್ಲ. ಇನ್ನು 60 ಆಗದಂತೆ ಕಾಣುವ ಈ ದೇಹ, 15 ಜನ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ, ಪ್ರಧಾನಿಗಳ ಜೊತೆ ಕುಳಿತವನು ಸಾಕಷ್ಟು ಅನುಭವವಿದೆ ಎಂದು ಅಂಬರೀಶ್ ನಮ್ರವಾಗಿ ನುಡಿದರು. ನಾನು ಪಿಯುಸಿ ಫೇಲಾಗಿದ್ದೇನೆ. ಆದರೆ ನನಗೆ ವಿದ್ಯೆ, ಛಲವಿದೆ ಎಂಬ ಅಂಬಿ ಹೇಳಿಕೆ ನೆರೆದವರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ಮೂಡಿಸಿತು.

gdg ambareesh 2

ಅಂದಿನ ಆ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್. ನಾರಾಯಣ ಕುಚಿಕು ಗೆಳೆಯನಿಗೆ ಜೈಕಾರ ಕೂಗಿದರು. 40 ವರ್ಷ ಚಿತ್ರರಂಗದಲ್ಲಿ ಸೇವೆ ಮಾಡಿರುವ ಅಂಬರೀಶ್ ಅವರನ್ನು ಯಾವ ವಿಶ್ವವಿದ್ಯಾಲಯ ಕೂಡ ಗುರುತಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು.

ನಂತರ ಮಾತನಾಡಿದ ಚಿತ್ರನಟಿ ಸುಮಲತಾ, ಉತ್ತರ ಕರ್ನಾಟಕದ ಜನತೆ ತೋರಿದ ಪ್ರೀತಿ ಅನನ್ಯ. ಇದರ ಮುಂದೆ ಅಂಬರೀಶ್ ಅವರಿಗೆ ಸರ್ಕಾರದ ಯಾವ ಪ್ರಶಸ್ತಿ ದೊಡ್ಡದಲ್ಲ. ಅಂತಹದ್ದರ ಬಗ್ಗೆ ಬೇಸರ ಮಾಡಿಕೊಂಡವರು ಅಂಬರೀಶ್ ಅಲ್ಲ ಎಂದರು.

1983 ರಿಂದ ಗದಗನಲ್ಲಿ ಅನಿಲ್ ಗರಗ ಎಂಬವರು ಅಂಬರೀಶ್ ಅಭಿಮಾನಿ ಬಳಗ ಕಟ್ಟಿಕೊಂಡಿದ್ದಾರೆ. ಅಂಬರೀಶ್ ಅವರ ಅಗಲಿಕೆಯಿಂದ ಆ ಅಭಿಮಾನಿ ಬಳಗ ಕಣ್ಣಿರಿಟ್ಟಿತು. 2012ರ ವೇಳೆ ಕಲಿಯುಗದ ಕರ್ಣ, ಇಂದ್ರಜಿತ್ ಕಾರ್ಯಕ್ರಮಕ್ಕೆ ಸಹಸ್ರಾರು ಅಭಿಮಾನಿಗಳು ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *