ಬೆಂಗಳೂರು: ಸಿಗರೇಟ್ ಬಿಟ್ರೆ ಎರಡು ದಿನ ಹೆಚ್ಚು ಬದುಕ್ತೀನಿ, ಇಲ್ಲಾಂದ್ರೆ ಎರಡು ದಿನ ಮೊದಲು ಹೋಗ್ತೀನಿ ಎಂದು ಎಂದು ಅಂಬರೀಶ್ ಹೇಳಿದ್ದರು.
ಮಾಧ್ಯಮವೊಂದಕ್ಕೆ ಅಂಬರೀಶ್ ಈ ಹಿಂದೆ ಸಂದರ್ಶನ ನೀಡಿದ್ದರು. ಈ ಸಮಯದಲ್ಲಿ, ನೀವು ಡ್ರಿಕ್ಸ್ ಬಿಟ್ಟಿದ್ದೀರಿ, ಸಿಗರೇಟನ್ನು ಬಿಡಬಹುದಲ್ಲವೇ ಎಂದು ಪ್ರಶ್ನೆ ಕೇಳಿದ್ದಕ್ಕೆ ಅಂಬರೀಶ್ ಈ ಮೇಲಿನಂತೆ ಉತ್ತರಿಸಿದ್ದರು.
ಇತ್ತೀಚೆಗೆ ಅಂಬರೀಶ್ ಪತ್ರಕರ್ತರಿಗೆ ಸಂದರ್ಶನ ನೀಡುವುದನ್ನು ನಿಲ್ಲಿಸಿದ್ದರು. ಸುದ್ದಿಗೋಷ್ಠಿ ಬಳಿಕ ಪ್ರತ್ಯೇಕವಾಗಿ ಬೈಟ್ ಕೇಳಿದರೆ ನಾನು ಹೇಳಿದ್ದನ್ನು ಪ್ರಸಾರ ಮಾಡಿ ಎಂದು ಹೇಳುತ್ತಿದ್ದರು.
ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ನಡುವಿನ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಯ ಬಾರಿಗೆ ಅಂಬರೀಶ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜುನ್ ಸರ್ಜಾ ಮತ್ತು ಶೃತಿ ಮಧ್ಯೆ ಅಂಬಿ ನಡೆಸಿದ ಸಂಧಾನ ವಿಫಲಗೊಂಡಿತ್ತು.
ನವೆಂಬರ್ 9 ರಂದು ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಂಬರೀಶ್ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಮಾರುಕಟ್ಟೆಯ ಬಗ್ಗೆ ಮಾತನಾಡಿ ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv