ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮೇಲೆ ರೆಬಲ್ ಸ್ಟಾರ್ ಅಂಬರೀಷ್ ಏಕಾಏಕಿ ಗರಂ ಆಗಿದ್ದಾರೆ. ಕೆಜಿಎಫ್ ಚಿತ್ರಕ್ಕಾಗಿ ಯಶ್ ಗಡ್ಡ ಬಿಟ್ಟಿದ್ದು, ಅದ್ದನ್ನು ತೆಗೆಯುವಂತೆ ಅಂಬರೀಶ್ ಯಶ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಯಶ್ ಸದಾ ಕ್ಲೀನ್ ಶೇವ್ ಲುಕ್‍ನಲ್ಲಿ ಇರುತ್ತಿದ್ದರು. ಈಗ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಷ್‍ಗೆ ಬೇಜಾರಾಗಿದ್ದು, ಹೀಗಾಗಿ ಹೋದಲ್ಲಿ ಬಂದಲ್ಲಿ ರಾಜಾಹುಲಿಗೆ ಗಡ್ಡ ತೆಗೆಯುವಂತೆ ವಾರ್ನ್ ಮಾಡುತ್ತಿದ್ದಾರೆ.
ಯಶ್ ಅವರಿಗೂ ಕೂಡ ಗಡ್ಡಮೀಸೆ ಬಿಟ್ಟುಕೊಂಡು ಓಡಾಡೋಕೆ ಇಷ್ಟವಿಲ್ಲ. ಆದರೆ ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಯದ ಕಾರಣ ಯಶ್ ಗಡ್ಡ ತೆಗೆಯುವಂತಿಲ್ಲ. ಮತ್ತೊಂದು ವಿಶೇಷವೆನೆಂದರೆ ಇನ್ನೂ ಒಂದು ತಿಂಗಳು ನಾನು ಗಡ್ಡಕ್ಕೆ ಕತ್ತರಿ ಹಾಕುವ ಹಾಗಿಲ್ಲ ಎಂದು ಸ್ವತಃ ಯಶ್ ಈ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.
ಇನ್ನೂ ಒಂದು ತಿಂಗಳು ರಾಕಿಂಗ್ ಸ್ಟಾರ್ ಯಶ್ ಅವರನ್ನು ಗಡ್ಡದಲ್ಲಿ ನೋಡಬಹುದು. ಆಮೇಲೆ ಕ್ಲೀನ್ ಶೇವ್ ಲುಕ್‍ನಲ್ಲಿ ಯಶ್ ಎಲ್ಲರ ಮುಂದೆ ಹಾಜರಾಗಲಿದ್ದಾರೆ. ಆದಷ್ಟು ಬೇಗ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಸಿ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.