ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್ ರಚನೆಯಿಂದ ಕಾಂಗ್ರೆಸ್ ಸಚಿವಾಕಾಂಕ್ಷಿಗಳಲ್ಲಿ ಭುಗಿಲೆದ್ದಿರುವ ಅತೃಪ್ತಿ, ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ಯಾರು ಎಷ್ಟೇ ಪ್ರಯತ್ನ ಪಟ್ರು ಮಂತ್ರಿಗಿರಿ ಕಳೆದುಕೊಂಡವರ ಅಸಮಾಧಾನ ಕಡಿಮೆಯಾಗ್ತಿಲ್ಲ. ಅದ್ರಲ್ಲೂ ಮಾಜಿ ಸಚಿವ ಎಂ.ಬಿ ಪಾಟೀಲ್ ಫುಲ್ ಗರಂ ಆಗಿದ್ದಾರೆ.
ಗುರುವಾರ ರಾತ್ರಿ ರೆಬಲ್ ಸ್ಟಾರ್ ಅಂಬರೀಶ್, ರಾಕ್‍ಲೈನ್ ವೆಂಕಟೇಶ್, ಜಮೀರ್ ಅಹಮದ್, ಕೃಷ್ಣ ಭೈರೇಗೌಡ, ನಾಗಠಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಜಿ ಶಾಸಕ ರಾಜು ಅಲಗೂರು, ಹಗರಿ ಬೊಮ್ಮನಹಳ್ಳಿ ಶಾಸಕ ಭೀಮನಾಯಕ್, ಸುಧಾಕರ್, ಜಾರಕಿಹೊಳಿ ಮತ್ತಿತರರು ಸದಾಶಿವನಗರದಲ್ಲಿರುವ ಎಂ ಬಿ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಸಮಾಧಾನ ಹೇಳಿದ್ದಾರೆ. ಇದನ್ನೂ ಓದಿ: ಪಕ್ಷಕ್ಕಾಗಿ ಶ್ರಮಿಸಿದ್ದ ನನ್ನನ್ನು ಕಡೆಗಣಿಸಿದ್ದು ಎಷ್ಟು ಸರಿ ಸಿದ್ದರಾಮಯ್ಯ ಎದುರು ಎಂ.ಬಿ. ಪಾಟೀಲ್ ಕಣ್ಣೀರು!
Advertisement
Advertisement
ಎಂಬಿ ಪಾಟೀಲ್ ಭೇಟಿ ಬಳಿಕ ಕೃಷ್ಣ ಭೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ವರಿಷ್ಠರ ತೀರ್ಮಾನದಿಂದ ಎಂಬಿ ಪಾಟೀಲ್ ಗೆ ಅಸಮಾಧಾನ ಆಗಿರುವುದು ನಿಜ. ಈ ಬಗ್ಗೆ ನಮ್ಮ ವರಿಷ್ಠರಿಗೆ ಮನವರಿಕೆ ಮಾಡಿಕೊಡ್ತೀವಿ. ಕೇವಲ ಎಂಬಿ ಪಾಟೀಲ್ ಗೆ ಮಂತ್ರಿ ಸ್ಥಾನ ಅಲ್ಲ, ಅವರಿಗೆ ಕಾಂಗ್ರೆಸ್ ನಲ್ಲಿ ಉತ್ತಮ ಭವಿಷ್ಯವಿದೆ. ಸದ್ಯ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಅವರು ನಮ್ಮ ಮಾತು ಕೇಳ್ತಾರೆಂಬ ನಂಬಿಕೆ ಇದೆ. ಅವರು ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಅಂತ ಹೇಳಿದ್ರು.