-ವಾಕಿಂಗ್ ಬಂದಿದ್ದಾಗ ನಾಯಿಮರಿಯನ್ನು ರಕ್ಷಿಸಿ ಮಾಲೀಕನಿಗೆ ನೀಡಿದ ಶ್ವಾನ
ಬೆಂಗಳೂರು: ಆಗತಾನೇ ಹುಟ್ಟಿದ ಬೀದಿನಾಯಿಮರಿಯನ್ನು ಗೋಣಿಚೀಲದಲ್ಲಿ ಕಟ್ಟಿ ಮೋರಿಗೆ ಎಸೆದ ಪಾಪಿಗಳಿಗೆ ಮೂಕಪ್ರಾಣಿಯೊಂದು ಅದನ್ನು ಬದುಕಿಸಿ ಪ್ರೀತಿ ಕಲಿಸಿದ ರೋಚಕ ಘಟನೆ ಕುರುಬರಹಳ್ಳಿಯಲ್ಲಿ ನಡೆದಿದೆ.
Advertisement
ಹೌದು. ಆಗ ತಾನೆ ಅಮ್ಮನ ಗರ್ಭದಿಂದ ಹೊರಬಂದಿದ್ದ ನಾಯಿ ಮರಿಗೆ ಹೊಟ್ಟೆ ಹಸಿವು ಹೊಸ ಪ್ರಪಂಚ ಏನು ಗೊತ್ತಾಗುತ್ತಿರಲಿಲ್ಲ. ಅಮ್ಮನ ಮಡಿಲಿಗೆ ತಡಕಾಡುತ್ತಿತ್ತು. ಆದರೆ ಮರಿಗೆ ಅಮ್ಮ ಯಾಕೆ ಸಿಗುತ್ತಿರಲಿಲ್ಲ. ಹಾಲು ಬೇಕು ಆದ್ರೇ ಅಮ್ಮನ ಕೂಗೋಣ ಅಂದರೆ ಗಂಟಲಿನಿಂದ ಸ್ವರನೇ ಹೊರಬರುತ್ತಿರಲಿಲ್ಲ. ಅಷ್ಟರಲ್ಲಿ ಅದ್ಯಾರೋ ನಾಯಿ ಮರಿಯನ್ನು ಎತ್ತುಕೊಂಡ್ರು. ನಾಯಿ ಮರಿ ನಂಗಿನ್ನು ಕಣ್ಣುಬಿಡೋಕೆ ಆಗಿತ್ತಿಲ್ಲ ಅದಕ್ಕೆ ಇವರು ನನ್ನ ಎತ್ತು ಕೊಂಡಿದ್ದಾರೆ ಎಂದು ಭಾವಿಸಿಕೊಂಡಿದೆ. ಆದರೆ ಅಮ್ಮನ ಹಾಲು ಕುಡಿಯುವ ಭಾಗ್ಯವೂ ಇಲ್ಲದ ನಾಯಿ ಮರಿಯನ್ನು ಆ ಮನುಷ್ಯ ಚೀಲದೊಳಗೆ ಹಾಕಿಕೊಂಡು ಎಲ್ಲೋ ಕರೆದುಕೊಂಡು ಹೋದನು.
Advertisement
Advertisement
ಚೀಲದಲ್ಲಿ ಕಟ್ಟಿದ್ದರಿಂದ ನಾಯಿ ಮರಿಗೆ ಉಸಿರಾಡಲು ಅಸಾಧ್ಯವಾಗಿತ್ತು. ಅಲ್ಲದೇ ಗಬ್ಬುನಾಥ ಬೀರೋ ಮೋರಿ ಪಕ್ಕ ಎಸೆದು ಹೋಗಿದ್ದರು. ಪಾಪ ನಾಯಿ ಮರಿ ಅಮ್ಮನ ನೆನೆದು ನಾನೇನು ತಪ್ಪು ಮಾಡ್ದೆ ಅಂತಾ ಎಸೆದುಹೋಗಿದ್ದಾರೆ. ನಂಗೆ ಯಾಕೆ ಹಿಂಸೆ ಕೊಡ್ತಿದ್ದಾರೆ ಎಂದು ಪರಿತಪಿಸುತ್ತಿತ್ತು. ಅಷ್ಟರಲ್ಲಿ ಮರಿಗೆ ಹೊಸ ಅಮ್ಮನಾಗಿ ಈ ಕ್ಯೂಟ್ ರೆಬಲ್ ಬಂದಿದೆ. ಮಾಲೀಕನೊಂದಿಗೆ ಮರಿಯನ್ನು ಎಸೆದ ದಾರಿಯಲ್ಲಿಯೇ ವಾಕಿಂಗ್ ಬಂದ ರೆಬಲ್ ಅದ್ಯಾಗೋ ಏನೋ ನಾಯಿ ಮರಿಯ ಬಳಿ ಬಂದಿದೆ. ಅವನದು ಅಮ್ಮನ ಮನಸು ಅನಿಸುತ್ತೆ. ನಾಯಿ ಮರಿಯನ್ನು ಕಚ್ಚಿ ಕೊಂದು ಬಿಡ್ತಾನೆ ಎಂದು ಅನ್ನಿಸುತ್ತಿತ್ತು. ಆದರೆ ರೆಬಲ್ ಮೆಲ್ಲನೆ ಮರಿಯನ್ನು ಗೋಣಿಚೀಲ ಬಾಯಲ್ಲಿ ಕಚ್ಚಿ ಮೋರಿಯಿಂದ ಹೊರತಂದು ದೂರದಲ್ಲಿ ನಿಂತಿದ್ದ ಆತನ ಮಾಕಲೀಕನಿಗೆ ತಂದೊಪ್ಪಿಸುತ್ತದೆ.
Advertisement
ನಾಯಿಮರಿಯನ್ನು ಬದುಕಿಸಿದ ರೆಬಲ್ ಈಗ ಅದಕ್ಕೆ ತಾಯಿಯಾಗಿದೆ. ಮರಿಯನ್ನು ಹಾಲು ಕುಡಿಯದಂತೆ ಬೀದಿಲಿ ಎಸೆದ ಮಾನವೀಯತೆ ಮರೆತ ಮನುಷ್ಯ ಜೀವಗಳಿಗೆ ರೆಬಲ್ ಚಾಟಿಬೀಸಿದ್ದಾನೆ. ಮರಿಯನ್ನು ಪರಮೇಶ್ ಎಂಬವರು ಸಾಕ್ತೀನಿ ಅಂತಾ ಮುಂದೆ ಬಂದಿದ್ದಾರೆ. ಮರಿಗೆ ಅಮ್ಮನ ನೆನಪಾದ್ರೂ ಮುದ್ದು ಮುದ್ದಾಗಿ ಆಡುವ ರೆಬಲ್ ಎಲ್ಲವನ್ನು ಮರೆಸುತ್ತಾನೆ. ಇದೀಗ ಬ್ರೀಡ್ ನಾಯಿ ರೆಬಲ್, ಬೀದಿನಾಯಿಮರಿಗೆ ಆಸರೆಯಾಗಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv