ಮುಂಬೈ: ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಅಲುಗಾಡುವಂತೆ ಮಾಡಿದ ಎಲ್ಲಾ ಅತೃಪ್ತ ಶಾಸಕರು ಶನಿವಾರ ವಿಕೆಂಡ್ ಟೂರ್ ಪ್ಲ್ಯಾನ್ ಮಾಡಿದ್ದಾರೆ.
ಮುಂಬೈನ ರೆಸಾರ್ಟಿನಲ್ಲಿ ಕಳೆದ ಒಂದು ವಾರದಿಂದ ವಾಸ್ತವ್ಯ ಮಾಡಿರುವ ಅತೃಪ್ತ ಶಾಸಕರು ಶಿರಡಿ ಹಾಗೂ ಔರಂಗಾಬಾದ್‍ಗಳಿಗೆ ಭೇಟಿ ನೀಡಲಿದ್ದಾರೆ. ಶನಿವಾರ ಬೆಳಗ್ಗೆ 7.30ಕ್ಕೆ ವಿಶೇಷ ವಿಮಾನದ ಮೂಲಕ ಶಿರಡಿಗೆ ಹೋಗಲಿರುವ ರೆಬಲ್ ಶಾಸಕರು ಶಿರಡಿ ಸಾಯಿಬಾಬಾ ದರ್ಶನ ಪಡೆಯಲಿದ್ದಾರೆ. ಬಳಿಕ ಶನಿಸಿಂಗಾನಪುರಲ್ಲಿ ಶನೀಶ್ವರನ ದರ್ಶನ ಮುಗಿಸಿ ಅಲ್ಲಿಂದ ಔರಂಗಾಬಾದ್‍ಗೆ ವಾಹನ ಮೂಲಕ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
Advertisement
ಮಹಾರಾಷ್ಟ್ರದ ಐತಿಹಾಸಿ ಪ್ರವಾಸಿ ತಾಣಗಳಾದ ಅಜಂತಾ, ಎಲ್ಲೋರಾ ಗುಹೆಗಳನ್ನು ವೀಕ್ಷಣೆ ಮಾಡಿ ಶನಿವಾರ ರಾತ್ರಿ ಔರಂಗಾಬಾದ್‍ನಲ್ಲಿ ವ್ಯಾಸ್ತವ್ಯ ಮಾಡಲಿದ್ದಾರೆ. ಭಾನುವಾರ ನಾಸಿಕ್‍ನ ತ್ರ್ಯಂಬಕೇಶ್ವರ ದೇವಸ್ಥಾನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ ಮುಂಬೈಗೆ ವಾಪಸ್ ಆಗಲಿದ್ದಾರೆ ಎಂದು ಕೇಳಿಬಂದಿದೆ.
Advertisement
ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿರುವ ಅತೃಪ್ತ ಶಾಸಕರು ಶುಕ್ರವಾರ ರೆನೈಸಿನ್ ಹೋಟೆಲ್‍ನಿಂದ ಹೊರ ಬಂದರು. ಮುಂಬೈನ ಬಾಂದ್ರದಲ್ಲಿರುವ ಸಿದ್ಧಿವಿನಾಯಕ ದರ್ಶನ ಪಡೆದ ಬಿ.ಸಿ ಪಾಟೀಲ್, ಬೈರತಿ ಬಸವರಾಜ, ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಸಂಕಷ್ಟ ನಿವಾರಿಸಲು ವಿಶೇಷ ಪೂಜೆ ಸಲ್ಲಿಸಿದರು.