ಕೋಪ-ತಾಪ (Angry) ಮನುಷ್ಯನ ಸಹಜ ಗುಣ. ಕೆಲವರಿಗೆ ಮೂಗಿನ ತುದಿಯಲ್ಲೇ ಕೋಪವಿರುತ್ತೆ. ಸಣ್ಣಪುಟ್ಟ ವಿಷಯಗಳಿಗೆಲ್ಲಾ ಕೋಪ ಮಾಡಿಕೊಳ್ಳುವವರಿರುತ್ತಾರೆ.
ಕೋಪವು ಅನೇಕ ಸಂದರ್ಭ ಮತ್ತು ಕಾರಣಗಳಿಂದ ಉಂಟಾಗಬಹುದು. ಕೆಲವೊಂದು ಆಘಾತಗಳು ನಿಮ್ಮ ಮನಸ್ಸನ್ನು ಪ್ರಚೋದಿಸಿ ಕೋಪಕ್ಕೆ ಕಾರಣವಾಗಬಹುದು. ಇಲ್ಲವೇ ಕೆಲವು ಸನ್ನಿವೇಶಗಳು ಕೋಪದಿಂದ ಪ್ರತಿಕ್ರಿಯಿಸುವಂತೆ ಮಾಡುತ್ತವೆ. ಕೆಲವೊಬ್ಬರು ಸದಾ ಕೋಪಗೊಳ್ಳುತ್ತಾರೆ. ಅದು ಯಾಕೆ ಗೊತ್ತಾ? ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?
Advertisement
Advertisement
ಒತ್ತಡದ ಪರಿಸ್ಥಿತಿ
ಒತ್ತಡದ ಪರಿಸ್ಥಿತಿ ಕೋಪಕ್ಕೆ ಕಾರಣವಾಗುತ್ತದೆ. ಒತ್ತಡಗಳು ಮನಸ್ಸಿಗೆ ಕಿರಿಕಿರಿ ಎನಿಸುತ್ತದೆ. ಆಗ ಯಾರೇ ಆದರೂ ತಾಳ್ಮೆ ಕಳೆದುಕೊಂಡು ಕೋಪಗೊಳ್ಳುತ್ತಾರೆ.
Advertisement
ಕುಟುಂಬದ ಹಿನ್ನೆಲೆ
ಕೆಲವರಿಗೆ ಕೋಪವು ಪೂರ್ವಜರಿಂದ ಬಳುವಳಿಯಾಗಿ ಬರುತ್ತದೆ. ಮಕ್ಕಳ ಮೇಲೆ ಕೋಪಗೊಳ್ಳುವುದು, ಕೂಗಾಡುವುದು, ಶಿಕ್ಷಿಸುವ ಕೆಲಸವನ್ನು ಕೆಲ ಪೋಷಕರು ಮಾಡುತ್ತಾರೆ. ಇದೇ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಮುಂದೆ ಅವರು ದೊಡ್ಡವರಾದಾಗ ತಮ್ಮ ಪೋಷಕರ ಗುಣಗಳನ್ನೇ ಬೆಳೆಸಿಕೊಳ್ಳಬಹುದು. ಇವರು ಕೂಡ ತಮ್ಮ ಮಕ್ಕಳ ಮೇಲೆ ಸಣ್ಣಪುಟ್ಟ ವಿಷಯಗಳಿಗೆ ಕೋಪಗೊಳ್ಳಬಹುದು. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
Advertisement
ಆಘಾತಕಾರಿ ಸನ್ನಿವೇಶ
ಕೆಲವೊಂದು ಆಘಾತಕಾರಿ ಸನ್ನಿವೇಶಗಳು ನಮ್ಮಲ್ಲಿ ಕೋಪವನ್ನುಂಟು ಮಾಡುತ್ತದೆ. ಅಹಿತಕರ ಸಂದರ್ಭದಲ್ಲಿ ಮನಸ್ಸಿನಲ್ಲಿ ಕೋಪ, ಹತಾಶೆ ಮನೋಭಾವ ಉಂಟು ಮಾಡುತ್ತದೆ.
ನಿರೀಕ್ಷೆ ಇಟ್ಟುಕೊಳ್ಳುವುದು
ನಿರೀಕ್ಷೆಗಳು ಕೆಲವೊಮ್ಮೆ ಹುಸಿಯಾಗಬಹುದು. ಅವಾಸ್ತವಿಕ ನಿರೀಕ್ಷೆಗಳು ನಿಮ್ಮ ನಿರಾಸೆಗೆ ಕಾರಣವಾಗಬಹುದು. ಆಗ ಕೋಪ-ತಾಪ ವ್ಯಕ್ತವಾಗುವುದು ಸಹಜ. ಇದನ್ನೂ ಓದಿ: ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?
ದುಃಖ
ದುಃಖವನ್ನು ನಿಭಾಯಿಸುವುದು ಕಷ್ಟ. ಕಾರಣ, ಕಾರಣಾಂತರಗಳಿಂದ ಎಷ್ಟೋ ಸಲ ನೀವು ದುಃಖಕ್ಕೆ ಒಳಗಾಗಬಹುದು. ಒಂದು ವೇಳೆ ಆ ದುಃಖವು ಪರಿಹಾರವಾಗದೆ ಉಳಿದಾಗ, ಅದು ನಿಮಗೆ ನಿರಂತರ ಕೋಪವನ್ನು ಉಂಟುಮಾಡಬಹುದು.
ಮಾನಸಿಕ ಆರೋಗ್ಯ
ಮಾನಸಿಕ ಆರೋಗ್ಯ ಸ್ಥಿತಿಯಿಂದ ಕೋಪ, ಹತಾಶೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ಕೋಪ ನಿಭಾಯಿಸುವುದು ಕಷ್ಟ.