ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಇತ್ತೀಚೆಗೆ ಕೇವಲ 3 ದಿನಗಳ ಅಂತರದಲ್ಲಿ 2 ಚೀತಾಗಳು (Cheetah) ಸಾವನ್ನಪ್ಪಿದ್ದವು. ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ಗಳಿಂದ (Radio Collar) ಉಂಟಾಗಿದ್ದ ಸೋಂಕೇ ಆ 2 ಚೀತಾಗಳ ಸಾವಿಗೆ ಕಾರಣ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಕಳೆದ ಮಂಗಳವಾರ ತೇಜಸ್ ಹಾಗೂ ಶುಕ್ರವಾರ ಸೂರಜ್ ಎಂಬ ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಶವವಾಗಿ ಪತ್ತೆಯಾಗಿತ್ತು. ತೇಜಸ್ ಕೆಲ ದಿನಗಳ ಹಿಂದೆ ಹೆಣ್ಣು ಚೀತಾಗಳೊಂದಿಗೆ ಕಾದಾಡಿ ಗಾಯಗೊಂಡಿತ್ತು. ಬಳಿಕ ಅದು ಚೇತರಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು. ಆದರೆ ಬಳಿಕ ಅದರ ಕತ್ತಿನ ಸುತ್ತ ಆಗಿದ್ದ ಸೋಂಕು ಕೂಡಾ ಅದರ ಸಾವಿಗೆ ಕಾರಣ ಎಂಬುದು ತಿಳಿದುಬಂದಿದೆ.
ತೇಜಸ್ ಹಾಗೂ ಸೂರಜ್ ಎರಡೂ ಚೀತಾಗಳ ಕತ್ತಿನ ಸುತ್ತಲೂ ರೇಡಿಯೋ ಕಾಲರ್‌ಗಳಿಂದಾಗಿ ಸೋಕು ಉಂಟಾಗಿದ್ದು, ಅದರ ಗಾಯಗಳಿಂದಾಗಿ ಅವು ಸಾವನ್ನಪ್ಪಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಕಳವಳಕ್ಕೆ ಕಾರಣವಾಗಿದೆ ಎಂದು ಚೀತಾ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿಯ ಅಧ್ಯಕ್ಷ ರಾಜೇಶ್ ಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು – 4 ತಿಂಗಳಲ್ಲಿ 8ನೇ ಘಟನೆ
ಇದೀಗ ರೇಡಿಯೋ ಕಾಲರ್ ಅಳವಡಿಸಲಾಗಿರುವ ಎಲ್ಲಾ ಚೀತಾಗಳನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಈ ಘಟನೆಗಳು ದುರದೃಷ್ಟಕರವಾಗಿದ್ದರೂ ಪ್ರಾಜೆಕ್ಟ್ ಚೀತಾಗೆ ಹಿನ್ನಡೆಯಲ್ಲ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಚೀತಾದ ಸಂತತಿಯ ಪುನರುತ್ಥಾನದ ಯೋಜೆನೆಯ ಅನುಷ್ಠಾನದಲ್ಲಿ ನೈಸರ್ಗಿಕ ಸಾವು ಸಹಜ. ಇದು ಸರಾಸರಿ ಸಾವಿನ ಪ್ರಮಾಣವನ್ನು ದಾಟಿಲ್ಲ. ಭಾರತಕ್ಕೆ ತರಲಾಗಿರುವ ಚೀತಾಗಳ ಪೈಕಿ 75% ರಷ್ಟು ಜೀವಂತವಾಗಿದ್ದು, ಆರೋಗ್ಯವೂ ಆಗಿವೆ. ಹೀಗಾಗಿ ಈ ಬಗ್ಗೆ ಆತಂಕ ಪಟುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ
Web Stories