ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ ಸ್ಮಾರ್ಟ್‍ಪೋನ್ ಸಂಸ್ಥೆಯು ನೂತನ ಫೀಚರ್ ಗಳನ್ನೊಳಗೊಂಡ ಅಗ್ಗದ ರಿಯಲ್‍ಮೀ ಸಿ1 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ರಿಯಲ್‍ಮಿ ಸಿ1 ಸ್ಮಾರ್ಟ್ ಫೋನಿನಲ್ಲಿ ಸೆಲ್ಫಿಗಾಗಿ 5 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ 13+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಬ್ಲಾಕ್ ಹಾಗೂ ಬ್ಲೂ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ. ಅಕ್ಟೋಬರ್ 11 ರಿಂದ ಕೇವಲ ಫ್ಲಿಪ್‍ಕಾರ್ಟ್ ಆನ್‍ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಮಾತ್ರ ಲಭ್ಯವಿರಲಿದೆ.
Advertisement
Advertisement
ಬೆಲೆ ಎಷ್ಟು?
2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಗೆ 6,990 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ರಿಯಲ್‍ಮಿ ಸಿ 1 ಸ್ಮಾರ್ಟ್ ಫೋನ್ ಸಿಗುತ್ತದೆ.
Advertisement
ರಿಯಲ್‍ಮಿ ಸಿ1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
156.2 x 75.6 x 8.2 ಮಿ.ಮೀ., 168 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.3 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720×1520 ಪಿಕ್ಸೆಲ್, 19:9 ಅನುಪಾತ 271 ಪಿಪಿಐ)
Advertisement
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 450, ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 506 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿ ಹೊಂದಿದೆ.
ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
ಮುಂಭಾಗ 5 ಎಂಪಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯೆಲ್ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಸ್ಕ್ರೀನ್ 3, ಫೇಸ್ ಅನ್‍ಲಾಕ್, 4,230 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಒಪ್ಪೊ ನೀಡಿದೆ.
Did you like the surprise?
The all new Realme C1 is here!
– 15.8 cm (6.2") Notch Full Screen
– 4230mAh Big Battery
– 13+2MP Dual Camera
First sale starts at 12PM, 11th Oct, #OnlyOnFlipkart.
Stay tuned: https://t.co/77fv3bkyOP#MegaDisplayMegaBattery pic.twitter.com/EGb99a6cFF
— realme (@realmeIndia) September 28, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv