ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ 2 ಪ್ರೋ ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ರಿಯಲ್‍ಮಿ 2 ಪ್ರೋ ಸ್ಮಾರ್ಟ್ಫ ಫೋನಿನಲ್ಲಿ ಸೆಲ್ಫಿಗಾಗಿ 16 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ 16+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಬ್ಲಾಕ್, ಡಾರ್ಕ್ ಬ್ಲೂ ಹಾಗೂ ಲೈಟ್ ಬ್ಲೂ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ. ಮುಂದಿನ ಅಕ್ಟೋಬರ್ 11 ರಿಂದ ಫ್ಲಿಪ್‍ಕಾರ್ಟ್ ಜಾಲತಾಣಗಳಲ್ಲಿ ಲಭ್ಯವಿರಲಿದೆ.
Advertisement
Advertisement
ಬೆಲೆ ಎಷ್ಟು?
4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 13,990 ರೂಪಾಯಿ, 6ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 15,990 ರೂಪಾಯಿ ಹಾಗೂ 8ಜಿಬಿ ರ‍್ಯಾಮ್/128 ಜಿಬಿ ಆಂತರಿಕ ಮೆಮೊರಿಗೆ 17,990 ರೂಪಾಯಿ ನಿಗದಿ ಪಡಿಸಿದೆ.
Advertisement
ರಿಯಲ್‍ಮಿ 2 ಪ್ರೋ ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
15.7 x 74 x 8.5 ಮಿ.ಮೀ., 174 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.3 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2340 ಪಿಕ್ಸೆಲ್, 19.5:9 ಅನುಪಾತ 409 ಪಿಪಿಐ)
Advertisement
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 660, ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 6ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹಾಗೂ 8ಜಿಬಿ ರ‍್ಯಾಮ್/128 ಜಿಬಿ ಆಂತರಿಕ ಮೆಮೊರಿ ಹೊಂದಿದೆ.
ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
ಮುಂಭಾಗ 16 ಎಂಪಿ ಕ್ಯಾಮೆರಾ, ಹಿಂಭಾಗ 16+2 ಎಂಪಿ ಡ್ಯುಯೆಲ್ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಸ್ಕ್ರೀನ್ 3, ಫಿಂಗರ್ ಪ್ರಿಂಟ್ ಸೆನ್ಸರ್, ಫೇಸ್ ಅನ್‍ಲಾಕ್, 3,500 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಒಪ್ಪೊ ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Setting a new benchmark, introducing the all new #Realme2Pro with #MaxPowerMaxStyle
-16 cm ( 6.3”) FHD+ Dewdrop Full Screen
– Snapdragon 660 AIE
– 16+2MP AI Dual Rear Camera & 16MP Front Camera
Exclusively on @Flipkart at 00:00 Hrs, Oct 11 https://t.co/yn6f7piFZe#ProudToBeYoung pic.twitter.com/SF2oJCnBj4
— realme (@realmeIndia) September 27, 2018