ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ 2 ವರ್ಷದಿಂದ ‘ಕೆಜಿಎಫ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಯಶ್ ತೋರಿಸುತ್ತಿರುವ ಡೆಡಿಕೇಶನ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
“ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಯಶ್. ಯಶ್ ‘ಕೆಜಿಎಫ್’ ಚಿತ್ರಕ್ಕಾಗಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಒಂದೇ ಸಿನಿಮಾಗೆ ಅವರು ಇಷ್ಟರ ಮಟ್ಟಿಗೆ ಡೆಡಿಕೇಶನ್ ಇಟ್ಟಿರುವುದು ನಂಬಲು ಸಾಧ್ಯವಿಲ್ಲ. ನಿಮ್ಮ ಡೆಡಿಕೇಶನ್ ಅದ್ಭುತ ಯಶ್. ನಿಮ್ಮಿಂದ ಸಾಕಷ್ಟು ವಿಷಯ ಕಲಿಯುತ್ತಿದ್ದೇನೆ” ಎಂದು ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡಿ ಹೊಗಳಿದ್ದಾರೆ.
Most wanted hero of KFI working for a movie with a rugged look for nearly 2 years is something unimaginable. Great dedication Yash. Learning lot from you. ????????????????????????
— Upendra (@nimmaupendra) July 7, 2018
ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಯಶ್ ತಾವು ಚಿತ್ರರಂಗಕ್ಕೆ ಬರಲು ಉಪೇಂದ್ರ ಅವರೇ ಸ್ಫೂರ್ತಿ. ಚಿತ್ರರಂಗಕ್ಕೆ ಬರಲು ಅವರ ಸಿನಿಮಾಗಳು ನನಗೆ ಪ್ರಾಭಾವ ಬೀರಿದೆ. ಅಲ್ಲದೇ ನಾನು ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದರು.
ಈಗ ಯಶ್ ತಮ್ಮ ಕೆಜಿಎಫ್ ಚಿತ್ರಕ್ಕಾಗಿ ತೋರಿಸುತ್ತಿರುವ ಡೆಡಿಕೇಶನ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚಿ ಯಶ್ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.
ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಈ ವರ್ಷ ತೆರೆ ಕಾಣಲಿದೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ‘ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.