‘ಹುಷಾರ್’ ಚಿತ್ರಕ್ಕಾಗಿ ಹಾಡಿದ ರಿಯಲ್ ಸ್ಟಾರ್ ಉಪೇಂದ್ರ

Public TV
1 Min Read
FotoJet 1 4

ನಿರ್ದೇಶನ, ನಟನೆ, ಸಂಭಾಷಣೆ  ಮೂಲಕ ಜನರಮನ ಗೆದ್ದಿರುವ ರಿಯಲ್ ಸ್ಟಾರ್ ಉಪೇಂದ್ರ, ಗಾಯಕರಾಗೂ ಜನಪ್ರಿಯ. ಪ್ರಸ್ತುತ ಸತೀಶ್ ರಾಜ್  ಮೂವಿ ಮೇಕರ್ಸ್  ಲಾಂಛನದಲ್ಲಿ,  ಸತೀಶ್ ರಾಜ್  ಕಥೆ- ಚಿತ್ರಕಥೆ -ಸಾಹಿತ್ಯ ಸಂಭಾಷಣೆ- ರಚಿಸಿ -ನಿರ್ಮಿಸಿ- ನಿರ್ದೇಶಿಸಿರುವ “ಹುಷಾರ್” ಚಿತ್ರದ “ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ” ಎಂಬ ಹಾಡನ್ನು ಹಾಡಿದ್ದಾರೆ.

FotoJet 2 5

ಉಪೇಂದ್ರ ಹಾಗೂ ಜಾಹ್ನವಿ ಆನಂದ್ ಹಾಡಿರುವ ಈ ಹಾಡಿಗೆ      ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಾಡು ಕೇಳಿ ಪ್ರಿಯಾಂಕ ಉಪೇಂದ್ರ ಅವರು, H20 ಚಿತ್ರದ “ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ” ಹಾಡಿನ ತರಹ ಇದೆ. ಈ ಹಾಡು ಅದೇ ರೀತಿ ಹಿಟ್ ಆಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

FotoJet 11

ಸತೀಶ್ ರಾಜ್ ಅವರು ಡಾ||ರಾಜ್   ಕುಮಾರ್ ಅವರ ಅಪ್ಪಟ ಅಭಿಮಾನಿ.  1990 ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು, ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ  ಮಾಡಿದ್ದಾರೆ. ಇವರಿಗೆ ರಂಗಭೂಮಿ ನಂಟು ಇದೆ. ಅಶ್ವಿನಿ ಅರುಣ್ ಕೃಷ್ಣನ್ ಅವರ ಸಹ ನಿರ್ಮಾಣವಿರುವ ಈ ಚಿತ್ರದ   ನಾಯಕನಾಗಿ ಸಿದ್ದೇಶ್ ನಟಿಸಿದ್ದಾರೆ.  ಆದ್ಯಪ್ರಿಯ, ರಚನ ಮಲ್ನಾಡ್, ವಿನೋದ್, ಡಿಂಗ್ರಿ ನಾಗರಾಜ್,  ಗಣೇಶ್ ರಾವ್,  ಸತೀಶ್ ರಾಜ್, ಪುಷ್ವ ಸ್ವಾಮಿ, ಲಯ ಕೋಕಿಲ, ಪವಿತ್ರ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *