ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ `ಯುಐ'(Ui Film) ಸಿನಿಮಾದ ಚಿತ್ರೀಕರಣಕ್ಕಾಗಿ ಹೊಸಪೇಟೆಗೆ ಉಪ್ಪಿ ಆ್ಯಂಡ್ ಟೀಮ್ ಆಗಮಿಸಿದ್ದಾರೆ. ಈ ವೇಳೆ ಅಪ್ಪು ಅವರಿಗೆ ಗೌರವ ಕೊಡುವುದರ ಜೊತೆಗೆ ಅವರ ಗುಣಗಳನ್ನ ನೀವು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.
`ಕಬ್ಜ’ (Kabza Film) ಸಿನಿಮಾ ಟೀಸರ್ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಬೆನ್ನಲ್ಲೇ `ಯುಐ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್‌ಗಾಗಿ ಹೊಸಪೇಟೆಗೆ ಆಗಮಿಸಿದ್ದಾರೆ. ಈ ವೇಳೆ ಅಪ್ಪು ಅಭಿಮಾನಿಗಳ ಜೊತೆ ಉಪ್ಪಿ ಮಾತನಾಡಿದ್ದಾರೆ. ಡಾ. ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿರುವ ಪುನೀತ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದ್ದಾರೆ.
ಅಪ್ಪು ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಅಪ್ಪು ಥರ ಬದುಕಬೇಕು. ಅಪ್ಪು ಪುತ್ಥಳಿ ಮಾಡಿದ್ದಾರೆ ಅಂತ, ಹೂವಿನ ಹಾರ ಹಾಕಿ ಮನೆಗೆ ಹೋಗೋದಲ್ಲಾ. ಅವರ ಗುಣಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾರು ಕೈ ಬಿಟ್ರು ಹೊಸಪೇಟೆ ಜನ ಕೈ ಬಿಡೋಲ್ಲಾ ಅಂತಾ ಅಪ್ಪು ಹೇಳಿದ್ದರು. ಇನ್ನೂ ರಾಜಕೀಯ ಮಾಡಬೇಡಿ, ಪ್ರಜಾಕೀಯ ಮಾಡಿ. ಪಕ್ಷ ನೋಡಿ ಓಟ್ ಹಾಕಬೇಡಿ, ಸಿದ್ದಾಂತ ನೋಡಿ ಓಟ್ ಹಾಕಿ ಎಂದು ಅಭಿಮಾನಿಗಳಿಗೆ ಉಪೇಂದ್ರ ಕರೆ ನೀಡಿದ್ದಾರೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ
ಬಳಿಕ ಅಭಿಮಾನಿಗಳಿಂದ ನೂಕು ನುಗ್ಗಲಾಗಿದ್ದು, ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಹಾಸಪಡಬೇಕಾಯಿತು. ಈ ವೇಳೆ ನಟ ಉಪೇಂದ್ರ ಅವರಿಗೆ ಡಾ.ರಾಜ್‌ಕುಮಾರ್ ಫ್ಯಾಮಿಲಿ ಫೋಟೋಸ್, ಪುನೀತ್ ಫೋಟೋಗಳನ್ನ ಅಭಿಮಾನಿಗಳು ಗಿಫ್ಟ್ ಮಾಡಿದ್ದಾರೆ.