Connect with us

Bengaluru City

ಚುನಾವಣೆ ಹೊತ್ತಲ್ಲಿ ಹೊಸದೊಂದು ಪಕ್ಷ ಎಂಟ್ರಿ – ಬುದ್ಧಿವಂತನಿಂದ `ಕೆಪಿಜೆಪಿ’ ಸ್ಥಾಪನೆ

Published

on

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಇಂದು ಅಧಿಕೃತವಾಗಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಪ್ರಜಾಕೀಯ ಮೂಲಕ ಸಂಪೂರ್ಣ ಬದಲಾವಣೆ ಘೋಷಣೆ ಮೊಳಗಿಸಿರುವ ಬುದ್ಧಿವಂತ ಅದಕ್ಕಾಗಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವನ್ನು ಸ್ಥಾಪಿಸಿದ್ದಾರೆ.

ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣ ಬದಲಾವಣೆ ತರೋದು ಉಪ್ಪಿಯ ಸೂಪರ್ ಕನಸು. ಬೆಂಗಳೂರಿನ ಗಾಂಧಿ ಭವನದಲ್ಲಿ ಆಟೋ ಚಾಲಕರ ಯೂನಿಫಾರಂನಲ್ಲಿ ಕಾಣಿಸಿಕೊಂಡ ಪತ್ನಿ ಪ್ರಿಯಾಂಕ, ತಂದೆ-ತಾಯಿ, ನಟ ಕುಮಾರ್ ಗೋವಿಂದ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಖಾದಿ ಕಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಖ್ಯಾತ ಕಲಾವಿದ ವಿಲಾಸ್ ನಾಯಕ್ ಉಪೇಂದ್ರರ ಭವಿಷ್ಯದ ಪರಿಕಲ್ಪನೆಯನ್ನು ಚಿತ್ರಪಟಲದಲ್ಲಿ ಮೂಡಿಸಿದರು. ಎತ್ತು, ರೈತ, ಆಟೋ, ಕನ್ನಡ ಧ್ವಜ ಹಿಡಿದಿರುವ ಬಾಲಕ ಈ ಚಿತ್ರಪಟಲದಲ್ಲಿದೆ.

ಬಳಿಕ ಮಾತನಾಡಿದ ಉಪೇಂದ್ರ ಅವರು, ಈ ಬದಲಾವಣೆ ನಮ್ಮಿಂದ ಆಗಬೇಕು. ಬಳಿಕ ನಾವು ಬದಲಾವಣೆಯನ್ನು ಬಯಸಬೇಕು. ಜನರಿಂದಲೇ ಬದಲಾವಣೆಯಾಬೇಕು ಎನ್ನುವ ನಿಟ್ಟಿನಲ್ಲಿ ಇಂದು ಇಲ್ಲಿ ಜನರನ್ನು ಸೇರಿಸಿದ್ದೀನಿ. ಒಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಬದಲಾವಣೆಯಾಗಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶ ಅಂದ್ರು.

ಪ್ರಜಾಕೀಯ ಅಂತಾ ಗೋಷಣೆ ಮಾಡಿದಾಗ ತುಂಬಾ ಜನ ನಮಗೆ ಮೈಲ್ ಹಾಗೂ ಪೋಸ್ಟ್ ಗಳನ್ನು ಹಾಕಿದ್ರು. ಸದನ್ನೆಲ್ಲಾ ಓದಿದ ಬಳಿಕ ನನಗನಿದ್ದು, ನಾನು ಒಂದು ಖಾಲಿ ಪಾತ್ರೆ ಅಂತ. ಯಾಕಂದ್ರೆ ಅಷ್ಟೋಂದು ಐಡಿಯಾಗಳು, ಸಮಸ್ಯೆಗಳು ಹಾಗೂ ಪರಿಹಾರಗಳು ನಮ್ಮ ಪ್ರಜೆಗಳಿಂದಲೇ ಹರಿದುಬಂದವು. ವಿದ್ಯಾಭ್ಯಾಸದ ವಿಧಾನ ಬದಲಾಗ್ಬೇಕು. ವಿದ್ಯಾರ್ಥಿಗಳು ಓದ್ತಿರೋದಕ್ಕು, ಮಾಡ್ತಿರೋ ಕೆಲಸಕ್ಕೂ ಸಂಬಂಧ ಇಲ್ಲದಂತಾಗಿದೆ ಅಂತ ಹೇಳಿದ್ರು.

ಶಮಿತಾ ಮಲ್ನಾಡ್ ಅವರಿಂದ ಗಣೇಶನ ಶ್ಲೋಕದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿ.ಮನೋಹರ್, ಗುರುಕಿರಣ್, ನಿರ್ದೇಶಕ ಬಿ.ರಾಮಮೂರ್ತಿ ಮತ್ತಿತರರು ಭಾಗಿಯಾಗಿದ್ದರು. ಮಹೇಶ್ ಗೌಡ ಎನ್ನುವವರು `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಹೆಸರಿನಲ್ಲಿ ಪಕ್ಷ ಮಾಡುವ ಯೋಚನೆ ಮಾಡಿದ್ರು. ಪ್ರಜಾಕೀಯ ಹೆಸರಿನ ಆಪ್ ಮಾಡಿದ್ದಾರೆ, ಅದನ್ನ ನವೆಂಬರ್ 10ರಂದು ಬಿಡುಗಡೆ ಮಾಡಲಾಗುತ್ತೆ ಪ್ರಜಾಕೀಯ ಮತ್ತು ಉಪ್ಪಿ ಹೆಸರಿನ ಆಪ್ ಗಳಿವೆ. ಅದು ಜನರೇ ಮಾಡಿಕೊಟ್ಟಿದ್ದಾರೆ.

ಪ್ರಧಾನಿಗೆ ಅವಮಾನ: ನಟ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪಿಸುತ್ತಿದ್ದಂತೆಯೇ ಇತ್ತ ಬಿಜೆಪಿಯವರು ಉಪ್ಪಿ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಕಾರಣ ಒಂದು ವಿಡಿಯೋ. ಈ ವಿಡಿಯೋದಲ್ಲಿ ಮೋದಿ ಭಾಷಣದ ಮದ್ಯೆ ಉಪೇಂದ್ರ ಅವರು ನಟಿಸಿದ ಚಿತ್ರವೊಂದರ `ಬರಿವೋಳು’ ಅನ್ನೋ ಹಾಡನ್ನು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಸುರೇಶ್ ಕುಮಾರ್ ಮತ್ತಿರರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಉಪ್ಪಿ ವಿರುದ್ಧ ಹೋರಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

https://www.youtube.com/watch?v=oFdyrl5xSTg

https://www.youtube.com/watch?v=pXdkQqp_QyE

Click to comment

Leave a Reply

Your email address will not be published. Required fields are marked *