ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡುತ್ತಿರುವ ‘ಯುಐ’ (UI Film) ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯೂರೋಪ್‌ನ ಹಂಗೇರಿಯಿಂದ ಯುಐ ಸಿನಿಮಾದ ಬಗ್ಗೆ ವಿಡಿಯೋ ಹಂಚಿಕೊಳ್ಳುವ ಮೂಲಕ ಉಪೇಂದ್ರ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಕೆಲ ತಿಂಗಳುಗಳ ಹಿಂದೆ ‘ಯುಐ’ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಿದ್ದರು. ಬಳಿಕ ಟ್ರೋಲ್ ಸಾಂಗ್‌ವೊಂದನ್ನು ಬಿಡುಗಡೆ ಮಾಡಿದ್ದರು. ಆ ನಂತರ ಈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಫ್ಯಾನ್ಸ್ ನಿರಾಸೆಯಗಿದ್ದರು. ಈಗ ಎಲ್ಲರ ತಲೆಗೆ ರಿಯಲ್ ಸ್ಟಾರ್ ಹುಳ ಬಿಟ್ಟಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಜೊತೆ ಉಪೇಂದ್ರ ಚರ್ಚೆ ಮಾಡುತ್ತಿರುವ ವಿಡಿಯೋ ಶೇರ್ ಅಂದು ‘ಎ’ ಇಂದು ‘ಯುಐ’ ಎಂದು ಕ್ಯಾಪ್ಷನ್ ನೀಡಿ ಕಮಿಂಗ್‌ಸೂನ್ ಎಂದು ಹೇಳಿದ್ದಾರೆ. ಆದರೆ ವಿಚಾರ ಏನು ಎಂಬುದು ರಿವೀಲ್ ಮಾಡಿಲ್ಲ.
View this post on Instagram
ಸದ್ಯ ಅಜನೀಶ್ ಲೋಕನಾಥ್ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡಲು ಹಂಗೆರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಂಗೇರಿಯ ಸಂಗೀತಗಾರರು ಭಿನ್ನವಾದ ಸಂಗೀತಗಾರರು ಅವರಿಗೆ ಜನಪದ ಶೈಲಿಯ ಪರಿಚಯವಿದೆ. ಅಲ್ಲಿನ ವಾದ್ಯಗಳು ಸಹ ಭಿನ್ನವಾಗಿದೆ. ‘ಯುಐ’ ಸಿನಿಮಾಕ್ಕೆ ಚೆನ್ನಾಗಿ ಸೂಟ್ ಆಗುತ್ತವೆಯಾದ್ದರಿಂದ ಹಂಗೇರಿಯಲ್ಲಿಯೇ ಮ್ಯೂಸಿಕ್ ರೆಕಾರ್ಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ವೇಳೆ, ಅಜನೀಶ್‌ಗೆ ಜೊತೆ ಉಪೇಂದ್ರ ಕೂಡ ಜೊತೆಯಾಗಿದ್ದಾರೆ. ಆದರೆ ಉಪೇಂದ್ರ ಶೇರ್ ಮಾಡಿರುವ ವಿಡಿಯೋದ ಅರ್ಥವೇನು? ಎಂದು ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾಯಬೇಕಿದೆ.
ಉಪೇಂದ್ರಗೆ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ನಾಯಕಿಯಾಗಿದ್ದಾರೆ. ಲಹರಿ ಸಂಸ್ಥೆ ಜೊತೆ ಶ್ರೀಕಾಂತ್ ಸೇರಿಕೊಂಡು ‘ಯುಐ’ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.