ಗಾಂಧಿನಗರದಲ್ಲಿ ಸೂಪರ್ ಸ್ಟಾರ್‌ಗಳ ಮಕ್ಕಳ ಎಂಟ್ರಿಯಾಗುತ್ತಿದೆ. `ನೆನಪಿರಲಿ’ ಪ್ರೇಮ್ (Nenapirali Prem) ಪುತ್ರಿ ಅಮೃತಾ (Amrutha Prem) ನಟನೆಗೆ ಎಂಟ್ರಿ ಕೊಡ್ತಿರುವ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮಗಳು ಐಶ್ವರ್ಯ ಎಂಟ್ರಿಯ ಬಗ್ಗೆ ಗುಸು ಗುಸು ಶುರುವಾಗಿದೆ.
Advertisement
ಇತ್ತೀಚೆಗಷ್ಟೇ ಡಾಲಿ ಪಿಕ್ಚರ್ಸ್ ನಿರ್ಮಾಣದ `ಟಗರು ಪಲ್ಯ’ (Tagaru Palya) ಚಿತ್ರದಲ್ಲಿ ಅಮೃತಾ ಪ್ರೇಮ್ (Amrutha) ನಾಯಕಿಯಾಗಿರುವ ಬೆನ್ನಲ್ಲೇ ನಟ ಉಪೇಂದ್ರ ಮಗಳ ಬರುವಿಕೆಗೆ ಕೌಂಟ್‌ಡೌನ್ ಶುರುವಾಗಿದೆ. ಸ್ಟಾರ್ ನಟ ನಟಿಯರ ಮಕ್ಕಳು ಚಿತ್ರರಂಗಕ್ಕೆ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ: `ಕೆಜಿಎಫ್’ ತಾತ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
Advertisement
Advertisement
ಪ್ರತಿಷ್ಠಿತ ಸಂಸ್ಥೆ ಹೊಂಬಾಳೆ ಬ್ಯಾನರ್ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್‌ಕುಮಾರ್ ಅವರನ್ನ ಲಾಂಚ್ ಮಾಡ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಹೊಸ ಚಿತ್ರದಲ್ಲಿ ಯುವಗೆ ನಾಯಕಿಯಾಗಿ ಐಶ್ವರ್ಯ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
Advertisement
ಹೊಂಬಾಳೆ ಸಂಸ್ಥೆಯಡಿ ನಾಯಕಿಯಾಗಿ ನಟಿಸುವಂತೆ ಉಪ್ಪಿ ಪುತ್ರಿಗೆ ಆಫರ್ ನೀಡಲಾಗಿದೆಯಂತೆ. ಮಗಳ ಸಿನಿ ಜರ್ನಿಗೆ ಉಪ್ಪಿ ಕುಟುಂಬ ಗ್ರೀನ್ ಸಿಗ್ನಲ್ ಕೊಡ್ತಾರಾ ಎಂಬುದನ್ನ ಕಾದುನೋಡಬೇಕಿದೆ.