Bengaluru CityCinemaDistrictsKarnatakaLatestMain PostSandalwood

`ಕೆಜಿಎಫ್ 2′ ಚಿತ್ರ ನೋಡಿ ಮಾಸ್ಟರ್ ಪೀಸ್ ಎಂದು ಹೊಗಳಿದ ರಿಯಲ್ ಸ್ಟಾರ್ ಉಪೇಂದ್ರ

`ಕೆಜಿಎಫ್ 2′ ಚಿತ್ರ ರಿಲೀಸ್ ಆದಮೇಲಂತೂ ರಾಕಿಭಾಯ್‌ದೇ ಹವಾ. ದೇಶದ ಮೂಲೆ ಮೂಲೆಯಲ್ಲೂ ಚಿತ್ರ ಸೌಂಡ್ ಮಾಡ್ತಿದೆ. ಅಭಿಮಾನಿಗಳು ಸಿನಿಮಾ ನೋಡಿ ಅಪ್ಪಿ ಒಪ್ಪಿಕೊಂಡಿದ್ದಾರೆ. ಸ್ಟಾರ್‌ಗಳು ಕೂಡ ಚಿತ್ರ ನೋಡಿ ಕ್ಲಿನ್ ಬೋಲ್ಡ್ ಆಗಿದ್ದಾರೆ. ಈಗ ರಿಯಲ್ ಸ್ಟಾರ್ ಉಪೇಂದ್ರ `ಕೆಜಿಎಫ್ 2′ ನೋಡಿ ಚಿತ್ರತಂಡಕ್ಕೆ ಶಭಾಷ್ ಎಂದಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸ ಮಧ್ಯೆ ಬಿಡುವು ಮಾಡಿಕೊಂಡು `ಕೆಜಿಎಫ್ 2′ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲ, ನಿರ್ದೇಶಕ ಪ್ರಶಾಂತ್ ಮತ್ತು ನಟ ಯಶ್ ಜತೆಗೆ ಇಡೀ ಚಿತ್ರತಂಡದ ಟೀಮ್ ವರ್ಕ್ಗೆ ಫಿದಾ ಆಗಿದ್ದಾರೆ. ಚಿತ್ರ ನೋಡಿ ಉಘೇ ಉಘೇ ಅಂದಿದ್ದಾರೆ.

 

`ಕೆಜಿಎಫ್ 2′ ಚಿತ್ರ ನೋಡಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. `ಕೆಜಿಎಫ್ 2′ ಇದೊಂದು ಮಾಸ್ಟರ್‌ಪೀಸ್ ಚಿತ್ರ, ಪ್ರಶಾಂತ್ ನೀಲ್ ಪ್ರತಿಭಾವಂತ ನಿರ್ದೇಶಕ ಜತೆಗೆ ಚಿತ್ರದ ಡೈರೆಕ್ಷನ್, ಕಥೆ, ಡೈಲಾಗ್, ಮ್ಯೂಸಿಕ್, ಹೊಂಬಾಳೆ ಫಿಲ್ಮ್ಸ್‌ ಸಾಹಸದ ಜೊತೆಗೆ ಯಶ್ ಅಭಿನಯವನ್ನು ನೋಡಿ ಮೆಚ್ಚಿ ನಟ ಉಪೇಂದ್ರ ಹೊಗಳಿದ್ದಾರೆ. ಸದ್ಯ ಈ ಟ್ವಿಟ್ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ:ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

ಯಶ್ ಮತ್ತು ಪ್ರಶಾಂತ್‌ನೀಲ್ ಕಾಂಬಿನೇಷನ್ ಚಿತ್ರಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ಸ್‌ ಮಾತ್ರವಲ್ಲದೇ ಪರಭಾಷಾ ಸ್ಟಾರ್ಸ್‌ ಕೂಡ ಚಿತ್ರ ನೋಡಿ ಬೋಲ್ಡ್ ಆಗಿದ್ದಾರೆ. ಏಪ್ರಿಲ್ 14ಕ್ಕೆ ರಿಲೀಸ್ ಆಗಿದ್ದ ಕೆಜಿಎಫ್ 2 ಯಶಸ್ವಿ ಪ್ರದರ್ಶನ ಆಗುತ್ತಿದೆ. ಜತೆಗೆ ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದೆ.

Leave a Reply

Your email address will not be published.

Back to top button