LatestMain PostNational

ನಿಜವಾದ ಹಿಂದುತ್ವವಾದಿಗಳು ಜಿನ್ನಾನನ್ನು ಕೊಲ್ಲುತ್ತಿದ್ದರು: ಸಂಜಯ್ ರಾವತ್

ಮುಂಬೈ: ನಿಜವಾದ ಹಿಂದುತ್ವವಾದಿಗಳು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಕೊಲ್ಲುತ್ತಿದ್ದರೆ ಹೊರತು ಮಹಾತ್ಮ ಗಾಂಧಿಯನ್ನಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಭಾರತವನ್ನು ವಿಭಜಿಸಿ ಪಾಕಿಸ್ತಾನದ ಹುಟ್ಟಿಗೆ ಜಿನ್ನಾ ಕಾರಣರಾದರು. ಅವರನ್ನು ಅಂದು ಯಾರದರೂ ಕೊಂದಿದ್ದರೆ ನಿಜವಾದ ಹಿಂದೂತ್ವವಾದಿ ಎನಿಸಿಕೊಳ್ಳುತ್ತಿದ್ದರು. ಆದರೆ ಅಂತಹ ಯಾವ ಕೆಲಸವನ್ನು ಮಾಡದೇ ಗೋಡ್ಸೆ ಗಾಂಧಿ ಅವರನ್ನು ಕೊಂದಿದ್ದು ತಪ್ಪು, ಗಾಂಧೀಜಿ ಹತ್ಯೆಗೆ ಇಡೀ ಜಗತ್ತೆ ಶೋಕವನ್ನು ವ್ಯಕ್ತಪಡಿಸುತ್ತದೆ ಎಂದು ಪ್ರತಿಕ್ರಿಯಿಸಿದರು.

ಹಿಂದುತ್ವವಾದಿ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ಇಂದು ಸತ್ಯವೇ ಮೇಲುಗೈ ಸಾಧಿಸಿದೆ. ಬಾಪು ಇನ್ನೂ ಜೀವಂತವಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ:  ಗಾಂಧೀಜಿಗೆ ಒಬ್ಬ ಹಿಂದುತ್ವವಾದಿ ಗುಂಡು ಹಾರಿಸಿ ಕೊಂದ: ರಾಹುಲ್‌ ಗಾಂಧಿ

ಜ.30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ. ಇಂದು ಬೆಳಿಗ್ಗೆ ಗಾಂಧೀಜಿಯವರ ಸಮಾಧಿ ಸ್ಥಳಕ್ಕೆ ಅನೇಕ ಗಣ್ಯರು ತೆರಳಿ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

Leave a Reply

Your email address will not be published.

Back to top button