ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೂಮಾಫಿಯಾವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯಪೂರ್ವಕ್ಕೂ ಮುನ್ನ ಬೆಂಗಳೂರು ಹಾಗೂ ದೆಹಲಿ ಭಾಗದಲ್ಲಿ ಮಿಲಿಟರಿ ಅಧಿಕಾರಿಯೊಬ್ಬರಿಗೆ ಸೇರಿದ್ದ ಜಾಗವನ್ನು ರಿಯಲ್ ಎಸ್ಟೇಟ್ ಮಾಫಿಯಾದವರು ಲಪಟಾಯಿಸಲು ರೋಚಕ ಸ್ಕೆಚ್ ಹಾಕಿದ ಸತ್ಯಾಂಶ ಬಯಲಾಗಿದೆ.
ವಿಚಿತ್ರ ಅಂದರೆ ಮಾಲೀಕನಿಲ್ಲದ ಈ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕಾಗಿದ್ದ ನೋಂದಣಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆಯೇ ಸಹಿ ಮಾಡಿಕೊಟ್ಟು ರಿಯಲ್ ಎಸ್ಟೇಟ್ ಮಾಫಿಯದವರಿಗೆ ಜಾಗವನ್ನು ಧಾರೆ ಎರೆದಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಬ್ರಿಟಿಷ್ ಅಧಿಕಾರಿ ಸ್ಕ್ಯಾಡರ್ 1943ರಲ್ಲಿ ವೈಟ್ ಫೀಲ್ಡ್ ನಲ್ಲಿ 36 ಗುಂಟೆ ಜಾಗ ಖರೀದಿಸಿದ್ದರು. ತದನಂತರ ಅವರು ಭಾರತ ಬಿಟ್ಟು ಹೋಗಿದ್ದಾರೆ. ಆದರೆ ಜಾಗದ ದಾಖಲೆಗಳು ಭಾರತದಲ್ಲಿಯೇ ಇದ್ದು, ಈ ಖಾಲಿ ಸೈಟ್‍ನ್ನು ಕಂಡ ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಮಾಲೀಕನ ಜಾಡು ಹಿಡಿದು, ಸ್ಕ್ಯಾಡರ್ ಹೆಸರಿನಲ್ಲಿ ನಕಲಿ ವ್ಯಕ್ತಿಯನ್ನು ಸೃಷ್ಟಿ ಮಾಡಿ ಜಾಗ ಲಪಟಾಯಿಸಲು ಹೊರಟ ಬಗ್ಗೆ ಬಯಲಾಗಿದೆ. ಅಷ್ಟೇ ಅಲ್ಲದೇ ಮಹದೇವಪುರ ಉಪನೋಂದಾಣಿಧಿಕಾರಿಗಳು ಪ್ರಮಾಣ ಪತ್ರದ ಮೇಲೆ ಯಾವುದೇ ದಾಖಲೆ ಫಿಲ್ ಮಾಡದೇ ಸಹಿ ಮಾಡಿ ಕೊಟ್ಟಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪರಮೇಶ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗ ಪಡಿಸಿದ್ದಾರೆ.
Advertisement
Advertisement
ಸರ್ಕಾರದ ವಶಕ್ಕೆ ಹೋಗಬೇಕಾಗಿದ್ದ ಭರ್ತಿ 70 ಕೋಟಿ ರೂ. ಮೌಲ್ಯದ ಜಾಗ ಈ ರೀತಿ ಸಿಕ್ಕಸಿಕ್ಕವರ ಕೈ ಸೇರುವುದು ಸರಿಯಲ್ಲ, ಮುಖ್ಯವಾಗಿ ಕಂದಾಯ ಸಚಿವರು ಈ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಶಶಿಕುಮಾರ್ ಕೂಡ ಒತ್ತಾಯಿಸಿದ್ದಾರೆ.