– ಹತ್ಯೆ ಪ್ಲ್ಯಾನ್‌ಗೆ ಹೌ ಟು ಕಿಲ್ ಅನ್ನೋ ಪುಸ್ತಕ ಓದಿದ್ದ ಅತ್ತೆ
ಬೆಂಗಳೂರು: ಸೋಲದೇವನಹಳ್ಳಿ ರಿಯಲ್ ಎಸ್ಟೇಟ್ ಉದ್ಯಮಿ (Real Estate Businessman) ಲೋಕನಾಥ್ ಸಿಂಗ್ ಕೊಲೆ ಪ್ರಕರಣದಲ್ಲಿ ಉದ್ಯಮಿಯ ಕರಾಳ ಮುಖ ಕೊಲೆ ಬಳಿಕ ರಿವೀಲ್ ಆಗುತ್ತಿದೆ. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ಆರೋಪಿ ಅಮ್ಮ ಮಗಳ ಸ್ಟೋರಿ ಕೇಳಿ ಪೊಲೀಸರೇ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಯುವತಿಯ ಜೊತೆಗೆ ಸಲುಗೆ ಬೆಳೆಸಿದ್ದ ಉದ್ಯಮಿ, ವೀಡಿಯೊ ಮಾಡಿಟ್ಟುಕೊಂಡು ಯುವತಿಯ ಬ್ಲ್ಯಾಕ್‌ಮೇಲ್ ಮಾಡಿ ಮದುವೆಯಾಗಿದ್ದಾನೆ. ಮದುವೆಯಾಗದಿದ್ದರೆ ವೀಡಿಯೊ ಹರಿಬಿಡೋದಾಗಿ ಧಮ್ಕಿ ಹಾಕಿದ್ದಾನೆ. ಬಳಿಕ ಡಿಸೆಂಬರ್‌ನಲ್ಲಿ ಯುವತಿ ಜೊತೆ ಉದ್ಯಮಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಇದನ್ನೂ ಓದಿ: Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ
ಮದುವೆ ಬಳಿಕ ಉದ್ಯಮಿಯ ವಂಚನೆಯ ಜಾಲ ಹೆಂಡತಿಗೆ ಗೊತ್ತಾಗಿದೆ. ಹಲವು ಮಹಿಳೆಯರ ಜೊತೆ ಉದ್ಯಮಿ ಸಂಬಂಧ ಹೊಂದಿದ್ದನಂತೆ. ಅಲ್ಲದೇ ಹೆಂಡ್ತಿಯ ತಾಯಿಯ ಮೇಲೂ ಆತ ಕಣ್ಣಿಟ್ಟಿದ್ದ. ಹೆಂಡತಿಯ ಬಳಿಯೇ ಆಕೆಯ ತಾಯಿಯ ಬಗ್ಗೆ ಕೆಟ್ಟದಾಗಿ ಮಾತಾಡಿದ್ದನಂತೆ. ಹೀಗಾಗಿ ಸಹಿಸಲಾರದೆ ಕೊಲೆ ಮಾಡಿರೋದಾಗಿ ಕೊಲೆಯಾದ ಲೋಕನಾಥ್‌ನ ಪತ್ನಿ ಹಾಗೂ ಅತ್ತೆ (Mother in law) ಹೇಳಿಕೆ ನೀಡಿದ್ದಾರೆ.
ಅಳಿಯನನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದ ಅತ್ತೆ, ಹೌ ಟು ಕಿಲ್ ಎನ್ನುವ ಪುಸ್ತಕ ಖರೀದಿಸಿ, ಓದಿದ್ದಾಳೆ. ಬಳಿಕ ಪಾರ್ಟಿ ನೆಪದಲ್ಲಿ ಮಗಳ ಮೂಲಕ ಅಳಿಯನನ್ನ ಕರೆಸಿಕೊಂಡು, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಅಳಿಯನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಬಾಗಿಲು ಮುರಿದು ಕಳ್ಳತನ – ನಾಲ್ವರು ಅರೆಸ್ಟ್, 5 ಕೆಜಿ ಚಿನ್ನ ವಶ