-ಬ್ಲ್ಯಾಕ್‌ಮೇಲ್ ಮಾಡಿ ಯುವತಿಯನ್ನ ವಿವಾಹವಾಗಿದ್ದ ಉದ್ಯಮಿ
ಬೆಂಗಳೂರು: ಹೆಸರಘಟ್ಟ (Hesaraghatta) ಬಳಿ ಬಿಜಿಎಸ್ ಲೇಔಟ್ (BGS Layout) ಬಳಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ (Real Estate Businessman) ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಹೆಣ್ಣು ಕೊಟ್ಟ ಅತ್ತೆಯೇ ತನ್ನ ಅಳಿಯನನ್ನು ಕೊಲೆಗೈದ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಮಾಗಡಿ ಶಾಸಕ ಬಾಲಕೃಷ್ಣ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲೋಕನಾಥ್ ಸಿಂಗ್ ಮಾ.22ರಂದು ಕೊಲೆಯಾಗಿದ್ದರು. ಮೇಲ್ನೋಟಕ್ಕೆ ಹಳೇ ವೈರಿಗಳು ಅಥವಾ ರೌಡಿಶೀಟರ್‌ಗಳು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸ್ವಂತ ಅತ್ತೆಯೇ (Mother-In-Law) ಅಳಿಯನನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಇದನ್ನೂ ಓದಿ: ʻಹನಿʼಟ್ರ್ಯಾಪ್ ಕೋಲಾಹಲದ ನಡುವೆ ಸಚಿವರು, ಶಾಸಕರ ಫೋನ್ ಟ್ಯಾಪಿಂಗ್ ಆರೋಪ!
ಕಳೆದ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಯೊಬ್ಬರ ಮಗಳಿಗೆ ಬ್ಲಾಕ್‌ಮೇಲ್ ಮಾಡಿ ಲೋಕನಾಥ್ ಮದುವೆ ಮಾಡಿಕೊಂಡಿದ್ದರು. ಮಗಳ ಭವಿಷ್ಯ, ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ಯುವತಿಯ ತಂದೆ-ತಾಯಿ ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಇದರಿಂದ ನೊಂದ ತಂದೆ, ತಾಯಿ ಇವನಿಗೆ ಒಂದು ಗತಿ ಕಾಣಿಸಬೇಕು ಎಂದು ಮೂಹರ್ತ ಫಿಕ್ಸ್ ಮಾಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ, ಬೇಸಿಗೆಯಲ್ಲೂ ತೊಂದರೆಯಾಗಲ್ಲ: ಕೆಪಿಟಿಸಿಎಲ್ ಎಂಡಿ
ಅಳಿಯ, ಮಗಳ ಜೊತೆ ಬಿಜಿಎಸ್ ಲೇಔಟ್‌ಗೆ ಮಾರ್ಚ್ 22ರಂದು ಯುವತಿಯ ತಾಯಿ ಬಂದಿದ್ದಾರೆ. ಲೋಕನಾಥ್ ಸಿಂಗ್‌ಗೆ ಸೇರಿದ ಜಾಗಕ್ಕೆ ಬಂದು ಪಾರ್ಟಿ ಮಾಡಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ-ಹೆಂಡತಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಗನ್ ಮ್ಯಾನ್‌ಗೆ ಏನನ್ನೋ ತರಲು ಹೇಳಿ ಕಳುಹಿಸಿದ್ದಾರೆ. ಚೆನ್ನಾಗಿ ಎಣ್ಣೆ ಹೊಡೆದು ಟೈಟ್ ಆಗಿದ್ದ ಅಳಿಯ ಲೋಕನಾಥ್ ಸಿಂಗ್‌ಗೆ ಅತ್ತೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು. ಯಾವಾಗ ಅಳಿಯ ನಿದ್ರೆಗೆ ಜಾರಿದ್ನೋ ಆಗ ಹರಿತವಾದ ಆಯುಧದಿಂದ ಅತ್ತೆ ಅಳಿಯನ ಕುತ್ತಿಗೆ ಕುಯ್ದಿದ್ದಾರೆ. ಮೊದಲೇ ನಿದ್ರೆ ಮಾತ್ರೆಯಿಂದ ನಿತ್ರಾಣರಾಗಿದ್ದ ಲೋಕನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಅಮ್ಮ- ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: IPL 2025 | ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಕಿತ್ತ ಚಿರಯುವಕ – ಧೋನಿಯಿಂದ ಬೆನ್ನುತಟ್ಟಿಸಿಕೊಂಡ ವಿಘ್ನೇಶ್ ಪುತ್ತೂರು ಯಾರು?