– ಡೆತ್‌ನೋಟ್‌ನಲ್ಲಿದ್ದ ರಹಸ್ಯವೇನು?
ಮಡಿಕೇರಿ: ರಿಯಲ್ ಎಸ್ಟೇಟ್ ಮಾಫಿಯಾದಿಂದ (Real Estate Mafia) ಮನನೊಂದು ಉದ್ಯಮಿಯೊಬ್ಬರು ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹೊನ್ನೂರ್ ಕಾವಲ್ ನಲ್ಲಿ ಬುಧವಾರ ಸಂಜೆ ನಡೆದಿದೆ. ಪ್ರಕರಣ ಸಂಬಂಧ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Advertisement
ಕೊಡಗಿನ ಕುಶಾಲನಗರದಲ್ಲಿ (Kushalnagar) ಉದ್ಯಮ ನಡೆಸುತ್ತಿದ್ದ ಮೂಲತಃ ಕೊಪ್ಪ ನಿವಾಸಿ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಆತ್ಮಹತ್ಯೆಗೆ ಶರಣಾದವರು. ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ ತನ್ನ ಪತ್ನಿಯನ್ನು ದೇವಸ್ಥಾನಕ್ಕೆಂದು ಹೇಳಿ ದೊಡ್ಡಹೊನ್ನೂರು ಕಾವಲ್‌ನ ಜಮೀನಿನ ಹಳೆಯ ಖಾಲಿ ಮನೆಗೆ ಕರೆತಂದಿದ್ದು ಅಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: 39 ಸಾವಿರ ಕೋಟಿ ಅನುದಾನದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕೆಲಸ ಆರಂಭ: ಸೋಮಣ್ಣ
Advertisement
Advertisement
ರಿಯಲ್ ಎಸ್ಟೇಟ್ ಮಾಫಿಯಾ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮೃತ ಸುರೇಶ್ ಆತ್ಮಹತ್ಯೆಗೆ ಕಾರಣರಾದವರ ಹೆಸರನ್ನ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ 12 ಮಂದಿ ವಿರುದ್ಧ ಕರಣ ದಾಖಲಾಗಿದೆ. ಮೃತ ದಂಪತಿ ಮರಣೋತ್ತರ ಪರೀಕ್ಷೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು
Advertisement
ಈ ನಡುವೆ ಗುರುವಾರ (ಇಂದು) ಮಧ್ಯಾಹ್ನ ಮೃತದೇಹಗಳನ್ನು ಮುಂದಿಟ್ಟು ಮೃತನ ಸಂಬಂಧಿಕರು, ಸ್ನೇಹಿತರು ಹಾಗೂ ಕುಶಾಲನಗರ, ಕೊಪ್ಪ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಶವಾಗಾರದ ಮುಂಭಾಗ ದಂಪತಿಗಳ ಸಾವಿಗೆ ಕಾರಣರಾದ ರಿಯಲ್ ಎಸ್ಟೇಟ್ ಮಾಫಿಯಾಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಆಗ್ರಹಿಸಿದರು. ಆರೋಪಿಗಳು ಪ್ರಭಾವ ಶಾಲಿಗಳಾಗಿದ್ದು ಹಲವರಿಗೆ ವಂಚನೆ ಎಸಗಿದ್ದಾರೆ. ಇದರಿಂದ ಅಮಾಯಕ ದಂಪತಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳನ್ನು ಕೂಡಲೆ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಪೊಲೀಸರನ್ನು ಒತ್ತಾಯಿಸಿದರು. ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚಾದ ಕಾಡು ಪ್ರಾಣಿಗಳ ಹಾವಳಿ – ಜೀವ ಭಯದಲ್ಲಿ ದಿನ ಕಳೆಯುತ್ತಿರುವ ಜನ
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಸುರೇಶ್ ಅವರ ಸ್ನೇಹಿತ ಕೆ.ಜಿ ಮನು, ಸುರೇಶ್ ನಡೆಸುತ್ತಿದ್ದ ವ್ಯವಹಾರದಲ್ಲಿ ಕೆಲವರು ಮೂಗು ತೂರಿಸಿ ದ್ರೋಹ ಮಾಡಿದ್ದಾರೆ. ಕುಶಾಲನಗರ ಸರ್ಕಾರಿ ಡಿಗ್ರಿ ಕಾಲೇಜು ಬಳಿ ಬಡಾವಣೆ ನಿರ್ಮಾಣಕ್ಕೆ ಜಾಗವೊಂದನ್ನು ಅಭಿವೃದ್ದಿಪಡಿಸುತ್ತಿದ್ದರು. ಸುರೇಶ್ ವ್ಯವಹಾರಕ್ಕೆ ಅಡ್ಡಗಾಲು ಹಾಕಿದ ರಿಯಲ್ ಎಸ್ಟೇಟ್ ಮಾಫಿಯಾದ ಕೆಲವರು ಮಾಲೀಕರಿಗೆ ಹೆಚ್ಚಿನ ಲಾಭದ ಆಮೀಷವೊಡ್ಡಿ ಆತನಿಂದ ವ್ಯವಹಾರ ಕಸಿದುಕೊಂಡಿದ್ದಾರೆ. ಇದರಿಂದ ಹೂಡಿಕೆ ಮಾಡಿದ್ದ ಹಣ ಕಳೆದುಕೊಂಡು ಇತ್ತ ಜಾಗವೂ ಇಲ್ಲದೇ ಮನನೊಂದು ಕೊನೆಗೇ ಯಾವುದೇ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಕಾರಣರಾದ ಜಾಗ ಮಾಲೀಕರು ಹಾಗೂ ಸಂಬಂಧಿಸಿದವರಿಗೆ ಸೂಕ್ತ ಕಾನೂನು ಕ್ರಮ ಆಗಬೇಕಿದೆ ಎಂದು ಆಗ್ರಹಿಸಿದರು.