ನವದೆಹಲಿ: ಕಪ್ಪುಹಣ ತಡೆಗಟ್ಟಲು 500, 1 ಸಾವಿರ ಮುಖಬೆಲೆಯ ನೋಟನ್ನು ನಿಷೇಧಿಸಿದ ಮೋದಿ ಸರ್ಕಾರ ಈಗ ರಿಯಲ್ ಎಸ್ಟೇಟ್ ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ಆರ್‍ಇಆರ್‍ಎ) ಜಾರಿಗೆ ತಂದಿದೆ.
ಹೌದು. 9 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆರ್‍ಇಆರ್‍ಎ ಕಾಯ್ದೆ 2016 ಇಂದಿನಿಂದ ಜಾರಿಗೆ ಬರಲಿದೆ. ಗ್ರಾಹಕ ಕೇಂದ್ರಿತ ಈ ಕಾಯ್ದೆ ಜಾರಿಯಿಂದ, ಖರೀದಿದಾರನೇ ದೊರೆಯಾಗುವ ಹೊಸ ಶಕೆ ಆರಂಭವಾಗಲಿದೆ. ಇದನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕೂಡ ಸ್ವಾಗತಿಸಿದ್ದಾರೆ. ಇದರಿಂದ ಬಡವರು ಮಧ್ಯಮವರ್ಗದವರಿಗೆ ಮೋಸ ಮಾಡಿದ್ರೆ ಡೆವಲಪರ್ಸ್‍ಗಳಿಗೆ ಬ್ರೋಕರ್‍ಗಳಿಗೆ ಹಾಗೂ ಖರೀದಿದಾರರಿಗೂ ಜೈಲು ಶಿಕ್ಷೆ ಗ್ಯಾರಂಟಿಯಾಗುತ್ತದೆ.
Advertisement
ರಿಯಲ್ ಎಸ್ಟೇಟ್(ನಿಯಂತ್ರಣ ಅಮತ್ತು ಅಭಿವೃದ್ಧಿ) ಮಸೂದೆ-2016 ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿಯೇ ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು. ಕಾಯ್ದೆಯ ಎಲ್ಲ 92 ಸೆಕ್ಷನ್‍ಗಳು ಮೇ 1 ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ.
Advertisement
ಒಟ್ಟಿನಲ್ಲಿ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ತ್ವರಿತ ಮತ್ತು ವ್ಯಾಪಕ ಬದಲಾವಣೆ ತರುವ ಮಹತ್ವದ ಕಾಯ್ದೆಯನ್ನ ಮೋದಿ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿದೆ. ಮನೆ ಖರೀದಿಸುವವರು, ಸೈಟು ಖರೀದಿ ಮಾಡೋರನ್ನ ರಕ್ಷಿಸಲು ಮತ್ತು ಪ್ರಾಮಾಣಿಕ ಖಾಸಗಿ ಉದ್ಯಮಿಗಳನ್ನು ಉತ್ತೇಜಿಸಲು ಅಗತ್ಯವಾದ ನಿಯಮಗಳೂ ಈ ಕಾಯ್ದೆಯಲ್ಲಿ ಇವೆ.
Advertisement
ಏನಿದು ರಿಯಲ್ ಎಸ್ಟೇಟ್ ಕಾಯ್ದೆ?
* ಗೃಹ ನಿರ್ಮಾಣದ ಯೋಜನೆಗಳು ಕಡ್ಡಾಯವಾಗಿ ನೋಂದಣಿಯಾಗಬೇಕು.
* ಗ್ರಾಹಕರಿಂದ ಸಂಗ್ರಹಿಸಿದ ಹಣದ ಶೇ.70ರಷ್ಟನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು.
* ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಬೇಕು. ಯೋಜನೆ ವಿಳಂಬವಾದರೆ ದಂಡ-ಜೈಲು ಶಿಕ್ಷೆ.
Advertisement
* ಯೋಜನೆಗಳ ವಿವರ ಮತ್ತು ಪ್ರಗತಿಯನ್ನು ನಿಯಂತ್ರಣ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕು.
* ಯೋಜನೆ ವಿಳಂಬವಾದರೆ ಖರೀದಿದಾರ ಪಡೆದ ಬ್ಯಾಂಕ್ ಸಾಲದ ತಿಂಗಳ ಬಡ್ಡಿಯನ್ನು ಕಟ್ಟಡ ನಿರ್ಮಾಣಗಾರ ಭರಿಸಬೇಕು.
* ಮೇಲ್ಮನವಿ ನ್ಯಾಯಮಂಡಳಿ ಮತ್ತು ನಿಯಂತ್ರಣ ಪ್ರಾಧಿಕಾರಗಳ ಆದೇಶ ಉಲ್ಲಂಘಿಸಿದರೆ ಜೈಲು ಶಿಕ್ಷೆ ಜೊತೆ ದಂಡ.
* ಡೆವಲಪರ್ಸ್ ಗಳಿಗೆ 3 ವರ್ಷ ಮತ್ತು ಏಜೆಂಟ್ ಹಾಗೂ ಖರೀದಿದಾರರಿಗೆ 1 ವರ್ಷ ಜೈಲು ಶಿಕ್ಷೆ.
* ಪ್ರಾಧಿಕಾರ ರಚಿಸದೇ ಹೋದರೆ ಆಯಾ ರಾಜ್ಯ ಸರ್ಕಾರದ ವಿರುದ್ಧ ಜನರೇ ದೂರು ನೀಡಬಹುದು.